ಪ್ರಗತಿವಾಹಿನಿ ಸುದ್ದಿ; ಥಾಣೆ: ಸೇತುವೆ ಕಾಮಗಾರಿ ವೇಳೆ ಕ್ರೇನ್ ಯಂತ್ರ ಕುಸಿದು ಬಿದ್ದು 17 ಕಾರ್ಮಿಕರು ಸಾವನ್ನಪ್ಪಿರುವ ಘೋರ ದುರಂತ ಮಹಾರಾಷ್ಟ್ರದ ಶಹಾಪುರ ತಾಲೂಕಿನ ಸರ್ಲಾಂಬೆ ಬಳಿ ನಡೆದಿದೆ.
ಸಮೃದ್ಧಿ ಮಹಾಮಾರ್ಗ ಮೂರನೇ ಹಂತದ ಕಾಮಗಾರಿ ವೇಳೆ ಈ ದುರಂತ ಸಂಭವಿಸಿದೆ. ಕಾಮಗಾರಿ ವೇಳೆ ಕ್ರೇನ್ ಕುಸಿದು ಬಿದ್ದಿದೆ. ಘಟನೆಯಲ್ಲಿ 17 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ