ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಸ್ತಿ ಆಸೆಗಾಗಿ ಮಗ ತನ್ನ ಪತ್ನಿಯೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿಯಲ್ಲಿ ನಡೆದಿದೆ.
ಚಿನ್ನಮ್ಮ (60) ಮೃತ ಮಹಿಳೆ. ಮಗ ರಾಘವೇಂದ್ರ ಹಾಗೂ ಸೊಸೆ ಸುಧಾ ಆಸ್ತಿಗಾಗಿ ಚಿನ್ನಮ್ಮ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ 2 ಎಕರೆ ಜಮೀನಿಗಾಗಿ ಹಿರಿಯ ಮಗ ತನ್ನ ತಾಯಿ ಜೊತೆ ಗಲಾಟೆ ಮಾಡಿಕೊಂಡಿದ್ದ. ಕಿರಿಯ ಮಗನಿಗೆ ಜಮೀನು ಕೊಡುವುದಾಗಿ ತಾಯಿ ಹೇಳಿದ್ದಕ್ಕೆ ಹಿರಿಯ ಮಗ ಕೋಪಗೊಂಡಿದ್ದ. ನಿನ್ನೆ ತೋಟದ ಬಳಿ ತಾಯಿ ಚಿನ್ನಮ್ಮ ಬಂದಾಗ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂಬ ಆರೊಪ ಕೇಳಿಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ