Kannada NewsKarnataka NewsLatest
ಹೃದಯ ಕಾಯಿಲೆಯಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿ ಸಾವು

ಪ್ರಗತಿವಾಹಿನಿ ಸುದ್ದಿ, ಉಪ್ಪಿನಂಗಡಿ: ಹೃದಯ ಸಂಬಂಧಿ ಕಾಯಿಲೆಯಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಅಹ್ಮದ್ ಸಹದ್ (16) ಮೃತಪಟ್ಟವ. ಈತ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅಕಾಲ ಸಾವಿಗೀಡಾಗಿದ್ದಾನೆ.
ಪೆದಮಲೆಯ ಸಮದ್ ಹಾಜಿ ಹಾಗೂ ರೇಷ್ಮಾ ದಂಪತಿ ಪುತ್ರ ಅಹ್ಮದ್ ಸಹದ್ ಇಂಡಿಯನ್ ಸ್ಕೂಲ್ ನಲ್ಲಿ ಓದುತ್ತಿದ್ದ. ಪಠ್ಯ ಚಟುವಟಿಕೆಯಷ್ಟೇ ಅಲ್ಲದೆ ಸಂಗೀತ ಮತ್ತಿತರ ಪಠ್ಯೇತರ ಚಟುವಟಿಕೆಗಳಲ್ಲೂ ಪ್ರತಿಭಾವಂತನಾಗಿದ್ದ.
ಅಹ್ಮದ್ ಸಹದ್ ಸಾವಿನ ಹಿನ್ನೆಲೆಯಲ್ಲಿ ಇಂಡಿಯನ್ ಸ್ಕೂಲ್ ಗೆ ರಜೆ ನೀಡಲಾಗಿದೆ.




