*ಚಂದ್ರಯಾನ-3 ಯಶಸ್ವಿ; ಲ್ಯಾಂಡ್ ಆಗಿರುವ ವಿಕ್ರಮ್ ನಲ್ಲಿದೆ ಬೆಳಗಾವಿಯಲ್ಲಿ ಸಿದ್ಧಪಡಿಸಿದ ಸೆನ್ಸರ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ-3 ಯಶಸ್ವಿಯಾಗಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ಮೂಲಕ ‘ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡ್ ಆದ ಮೊದಲ ರಾಷ್ಟ್ರ ಭಾರತ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಈ ಸಾಧನೆಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಜುಲೈ 14ರಂದು ಇಸ್ರೋ ಸಂಸ್ಥೆ ಚಂದ್ರಯಾನ-3 ಉಡಾವಣೆ ಮಾಡಿತ್ತು. ಇದೀಗ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳವನ್ನು ಯಶಸ್ವಿಯಾಗಿ ತಲುಪಿದೆ. ಚಂದ್ರನ ಕಡೆಗೆ 34 ದಿನಗಳ ಸುದೀರ್ಘ ಪ್ರಯಾಣದ ನಂತರ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಲ್ಯಾಂಡ್ ಆಗಿದೆ. ಚಂದ್ರಯಾನ -3ರ ಯಶಸ್ಸಿನಲ್ಲಿ ಬೆಳಗಾವಿಯ ಪಾತ್ರವೂ ಪ್ರಮುಖವಾಗಿದೆ. ಚಂದ್ರಯಾನ-3ಕ್ಕೆ ಬೆಳಗಾವಿಯ ದೀಪಕ್ ದಢೂತಿ ನೀಡಿದ್ದ ಸೆನ್ಸರ್ ಕೂಡ ಅಳವಡಿಸಗಿದೆ ಎಂಬುದು ಹೆಮ್ಮೆಯ ವಿಷಯ.
ಈ ಹಿಂದೆ ಅಮೆರಿಕಾದಲ್ಲಿದ್ದ ದೀಪಕ್, ಅಬ್ದುಲ್ ಕಲಾಂ ಪ್ರೇರಣೆಯಿಂದ ಭಾರತಕ್ಕೆ ಬಂದು ಬೆಳಗಾವಿಯಲ್ಲಿ ತಮ್ಮದೇ ಆದ ಸರ್ವೋಕಂಟ್ರೋಲ್ಸ್ ಏರೋಸ್ಪೇಸ್ ಮತ್ತು ಟೆಕ್ನಾಲಜಿ ಪ್ರೈ.ಲಿ ಎಂಬ ಹೆಸರಿನ ಸ್ವಂತ ಕಂಪನಿಯನ್ನು ಸ್ಥಾಪಿಸಿದ್ದು, ಕಳೆದ 20 ವರ್ಷಗಳಿಂದ ಬೆಳಗಾವಿಯಲ್ಲಿ ತಮ್ಮದೇ ಕಂಪನಿ ನಡೆಸುತ್ತಿದ್ದಾರೆ. ಈ ಕಂಪನಿಯಲ್ಲಿ ಸೆನ್ಸರ್ ನ್ನು ಸಿದ್ಧಪಡಿಸುತ್ತಾರೆ. ಚಂದ್ರಯಾನ -3ಕ್ಕೆ ಕ್ರಯೋಜನಿಕ್ ಸೆನ್ಸರ್ ಸ್ಪೇಸ್ ಹೆಸರಿನ ಸೆನ್ಸರ್ ಸಿದ್ಧಪಡಿಸಿ ಎರಡು ವರ್ಷದ ಹಿಂದೆ ನೀಡಿದ್ದರು.
ಇದನ್ನು ಸೋಲಾರ್ ಪ್ಯಾನಲ್ ಎನರ್ಜಿ ಸಲುವಾಗಿ ಮತ್ತು ವಿಕ್ರಮ್ ನ ಮೊಮೆಂಟ್ ಕಂಟ್ರೋಲ್ಸೆನ್ ನಲ್ಲಿ ಬಳಕೆ ಮಾಡಲಾಗಿದೆ. ಈಗ ಚಂದ್ರನಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ನಲ್ಲಿ ಬೆಳಗಾವಿಯಲ್ಲಿ ಸಿದ್ಧಪಡಿಸಿದ ಸೆನ್ಸರ್ ಇದೆ ಎಂಬುದು ಹೆಮ್ಮೆಯ ವಿಷಯ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ