Kannada NewsKarnataka NewsLatest

*ಶಿಕ್ಷಕನಿಂದಲೇ ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪ ; ಹೊಡೆದು ರಾತ್ರೋರಾತ್ರಿ ಮನೆಯಿಂದ ಹೊರಹಾಕಿದ ಪತಿ*

ಪ್ರಗತಿವಾಹಿನಿ ಸುದ್ದಿ: ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕನೇ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿರುವ ಘಟನೆ ಚಿತ್ರದುರ್ಗದ ಜೆ.ಎನ್.ಕೋಟೆ ಗ್ರಾಮದಲ್ಲಿ ನಡೆದಿದೆ.

Home add -Advt

ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಕೆಂಚೇಶ್ವರ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಕೆಂಚೇಶ್ವರ್, ಪತ್ನಿ ಹಾಲಮ್ಮಳನ್ನು ಮನಬಂದಂತೆ ಥಳಿಸಿ ರಾತ್ರೋರಾತ್ರಿ ಮನೆಯಿಂದ ಹೊರ ಹಾಕಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಹಾಲಮ್ಮ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಒಂದು ವರ್ಷದ ಹಿಂದಷ್ಟೇ ಕೆಂಚೇಶ್ವರ್ ಹಾಗೂ ಹಾಲಮ್ಮ ವಿವಾಹವಾಗಿತ್ತು. ಇದೀಗ ಕೆಂಚೇಶ್ವರ್ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಹಿಂಸಿಸುತ್ತಿದ್ದಾನೆ ಎನ್ನಲಾಗಿದೆ. ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಹಾಲಮ್ಮ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.


Related Articles

Back to top button