ಬಸವಾದಿ ಶರಣರ ಕೊಡುಗೆ ಅಪಾರವಾಗಿದೆ
ಪ್ರಗತಿವಾಹಿನಿ ಸುದ್ದಿ, ನಂದೇಶ್ವರ (ಅಥಣಿ) –
ಬಸವಾದಿ ಶರಣರ ಕೊಡುಗೆ ನಮ್ಮ ನಾಡಿಗೆ ದೇಶಕ್ಕೆ ಅಪಾರವಾಗಿದೆ. ನಂದೇಶ್ವರ ಗ್ರಾಮದಲ್ಲಿ ೧೨ ನೇ ಶತಮಾನದಲ್ಲಿ ಚನ್ನಬಸವಣ್ಣರು ಬಸವೇಶ್ವರ ದೇವಸ್ಥಾನವನ್ನು ಸ್ಥಾಪನೆ ಮಾಡಿ ಈ ಭಾಗದಲ್ಲಿ ಮಹತ್ವದ ಕಾರ್ಯ ಮಾಡಿದ್ದಾರೆ. ಗ್ರಾಮಸ್ಥರು ಪ್ರವಾಹ ಸಂತ್ರಸ್ತರಾಗಿದ್ದರು ಕೂಡಾ ಶ್ರಾವಣ ಮಾಸದ ಅಂಗವಾಗಿ ಬಸವೇಶ್ವರ ಜಾತ್ರೆಯನ್ನು ವಿಜ್ರಂಭಣೆಯಿಂದ ಮಾಡುತ್ತಿರುವುದು ಗ್ರಾಮಸ್ಥರ ಭಕ್ತಿ ಶ್ರೀಮಂತಿಕೆಯನ್ನು ತೋರಿಸುತ್ತದೆ ಎಂದು ಅಥಣಿ ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಗುರುವಾರ ಜರುಗಿದ ಬಸವೇಶ್ವರ ಜಾತ್ರೆಗೆ ಚಾಲನೆ ನೀಡಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರವಾಹ ಸಂತ್ರಸ್ತರು ಧೃತಿಗೇಡಬೇಡಿ. ಕಳೆದುಕೊಂಡ ಜಾಗದಲ್ಲಿಯೇ ಮರಳಿ ಸಂಪಾದಿಸಿ ಮಾದರಿ ಜೀವನ ಸಾಗಿಸಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಮೇಶಗೌಡ ಪಾಟೀಲ, ಬಸಪ್ಪ ಚಂಡಕಿ, ಶಿವಾನಂದ ಪಾಟೀಲ, ವಿರುಪಾಕ್ಷ ಹಿರೇಮಠ, ಬಾಳಾಸಾಹೇಬ ಪಾಟೀಲ, ಹಣಮಂತ ಚಂಡಕಿ, ಆರ್.ಎಲ್. ಪಾಟೀಲ, ರಾಮು ತೇಲಿ, ಅಪ್ಪಾಸಾಬ ಮೂಧೋಳ, ಚಿದಾನಂದ ಬಡಿಗೇರ, ಅರ್ಚಕ ಶಿವಾನಂದ ಬಸವನ ಪೂಜಾರಿ, ಗುರುರಾಜ ಜನವಾಡ, ಕೆಂಚಪ್ಪ ಪಾಟೀಲ, ರಾಘವೇಂದ್ರ ಕುಲಕರ್ಣಿ, ಗುಂಡುರಾವ ಲಾಲಸಿಂಗಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ