Belagavi NewsBelgaum NewsLatest
*ರೈಲಿನಲ್ಲಿ ಐವರಿಗೆ ಚಾಕು ಇರಿದ ಮುಸುಕುದಾರಿ; ಓರ್ವ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ರೈಲಿನಲ್ಲಿ ಟಿಕೆಟ್ ಚೆಕಿಂಗ್ ಮಾಡುವ ವೇಳೆ ಮುಸುಕುದಾರಿಯೋರ್ವ ಐವರ ಮೇಲೆ ಚಾಕು ಇರಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಧಾರವಾಡದಿಂದ ಹೊರಟ್ಟಿದ್ದ ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್ಪ್ರೆಸ್ ನಲ್ಲಿ ಈ ಘಟನೆ ನಡೆದಿದ್ದು, ಟಿಸಿ ಮುಸುಕುದಾರಿಯೊಬ್ಬನಿಗೆ ಟಿಕೇಟ್ ಕೇಳಿದಾಗ ಆತ ಟಿಸಿ ಹಾಗೂ ಸಿಕ್ಕ ಸಿಕ್ಕವರಿಗೆ ಚಾಕುವಿಂದ ಇರಿದಿದ್ದಾನೆ. ಘಟನೆಯಲ್ಲಿ ದೇವವೃಷಿ ವರ್ಮಾ (23) ಎಂಬುವವರು ಮೃತಪಟ್ಟಿದ್ದಾನೆ.
ಟಿಕೇಟ್ ತೋರಿಸು ಎಂದಿದ್ದಕ್ಕೆ ಟಿಸಿ ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾದಲ್ಲಿ ಘಟನೆ ನಡೆದಿದೆ.
ಕೃತ್ಯ ಎಸಗಿ ಅಪರಚಿತ ಮುಸುಕುದಾರಿ ಪರಾರಿಯಾಗಿದ್ದಾನೆ. ಗಾಯಾಳು ಟಿಸಿ ಸೇರಿ ನಾಲ್ವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.




