ಕಚ್ಚಿದ ಹಾವಿನ ಸಮೇತ ಆಸ್ಪತ್ರೆಗೆ ಬಂದ ಯುವಕ: ಬೆಚ್ಚಿ ಬಿದ್ದ ಜನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆಯ ಬಳಿ ಕಚ್ಚಿದ ಹಾವನ್ನು ಹಿಡಿದುಕೊಂಡು ಯುವಕನೋರ್ವ ಆಸ್ಪತ್ರೆಗೆ ಬಂದಿದ್ದು, ಹಾವು ನೋಡಿದ ಸಾರ್ವಜನಕರು ಒಂದು ಕ್ಷಣ ಆತಂಕಕ್ಕೆ ಒಳಗಾಗಿದ್ದಾರೆ.
ಬೆಳಗಾವಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದ ಶಾಹೀದ್ ಎಂಬಾತನ ಮನೆ ಮುಂದೆ ಸೋಮವಾರ ಸಾಯಂಕಾಲ ಹಾವು ಕಾಣಿಸಿಕೊಂಡಿದೆ. ಅದನ್ನು ಹಿಡಿದು ಊರ ಆಚೆ ಬಿಡಲು ಮುಂದಾಗಿದ್ದಾನೆ. ಹಾವು ಬಿಡುವ ವೇಳೆ ಹಾವು ಕಚ್ಚಿದೆ. ಬಳಿಕ ಕಚ್ಚಿದ ಹಾವು ಹಿಡಿದುಕೊಂಡು ನೇರವಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದಾನೆ. ಆಸ್ಪತ್ರೆಯಲ್ಲಿ ಇದ್ದವರು ಹಾವು ನೋಡಿ ಬೆಚ್ಚಿ ಬಿದ್ದಿದ್ದಾರೆ.
ಅದು ಯಾವ ಹಾವು, ಅದರಲ್ಲಿ ಎಷ್ಟು ವಿಷ ಇರುತ್ತದೆ. ಅದು ಕಚ್ಚಿದೆ ಬಳಿಕ ಎಷ್ಟು ವಿಷ ಬಿಡುತ್ತದೆ ಎಂದು ವೈದ್ಯರಿಗೆ ತೋರಿಸಲು ಹಾವು ಹಿಡಿದ ಯುವಕ ಹಾವಿನ ಸಮೇತ ಆಸ್ಪತ್ರೆಗೆ ಬಂದಿದ್ದ ಇದನ್ನು ನೋಡಿದ ಜನ ಕಕ್ಕಾಬಿಕ್ಕಿಯಾಗಿ, ಜನ ಮೊಬೈಲ್ ನಲ್ಲಿ ಶೂಟ್ ಮಾಡುವದನ್ನು ನೋಡಿದ ಯುವಕ ಆಸ್ಪತ್ರೆಯ ವೈದ್ಯರಿಗೆ ತೋರಿಸದೆ ಮರಳಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ