ಪ್ರಗತಿವಾಹಿನಿ ಸುದ್ದಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪ್ರಕರಣದ ಬೆನ್ನಲ್ಲೇ ಪ್ರಜ್ವಲ್ ಸಹೋದರ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಶಾಸಕ ಹೆಚ್.ಡಿ.ರೇವಣ್ಣ ಮತ್ತೋರ್ವ ಪುತ್ರ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮದ ಆರೋಪ ಕೇಳಿಬಂದಿದ್ದು, ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತ ಯುವಕನೊಬ್ಬ ಸೂರಜ್ ವಿರುದ್ಧ ಈ ಆರೋಪ ಮಾಡಿ, ಗೃಹ ಸಚಿವರು, ಡಿಜಿಪಿ, ಎಸ್ ಪಿಗೆ ದೂರು ನೀಡಿದ್ದಾನೆ.
ಸೂರಜ್ ರೇವಣ್ಣ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆಯೇ ಆರೋಪ ಮಾಡಿದ ಯುವಕನ ವಿರುದ್ಧವೇ ಸೂರಜ್ ಆಪ್ತ ಶಿವಕುಮಾರ್ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯುವಕ ಬೆದರಿಕೆ ಹಾಕಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂದು ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ.
ಶಿವಕುಮಾರ್ ಎಂಬುವವರಿಗೆ ಯುವಕ ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಹೇಳಿದ್ದಾನಂತೆ ಅದಕ್ಕೆ ಶಿವಕುಮಾರ್, ನೀನೇ ಬಾಸ್ ಭೇಟಿಯಾಗು ಎಂದು ಫೋನ್ ನಂಬರ್ ಕೊಟ್ಟಿದ್ದಾಗಿ ಉಲ್ಲೇಖಿಸಿದ್ದಾರೆ. ಜೂನ್ 16ರಂದು ಗನ್ನಿಕಡದ ತೋಟದ ಮನೆಗೆ ಸಂತ್ರಸ್ತ ಯುವಕ ಕೆಲಸ ಕೇಳಲು ಹೋಗಿದ್ದು, ವಾಪಾಸ್ ಆದ ಬಳಿಕ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನನಗೆ ಕಷ್ಟ ಇದೆ. ಕೆಲಸದ ಅಗತ್ಯವಿದೆ ನೀನೂ ಕೆಲಸ ಕೊಡಿಸಲ್ಲ, ನಿನ್ನ ಬಾಸು ಕೆಲಸ ಕೊಡಿಸ್ತಿಲ್ಲ. ನನಗೆ ಹಣದ ಅಗತ್ಯವಿದೆ ನಿಮ್ಮ ಬಾಸ್ ನಿಂದ 5 ಕೋಟಿ ಹಣ ಕೊಡಿಸದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ಹಾಕಿವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಸೂರಜ್ ಗೆ ಶಿವಕುಮಾರ್ ತಿಳಿಸಿದ್ದರಂತೆ. ಆಗ ಸೂರಜ್, ಯುವಕ ಮನೆಗೆ ಬಂದಾಗ ಭದ್ರತೆಗೆ ನೇಮಿಸಿದ್ದ ಪೊಲೀಸರು ಕೂಡ ಇದ್ದರು. ನಾನು ಯಾವ ತಪ್ಪು ಮಾಡಿಲ್ಲ. ಯಾಕೆ ಹಣ ಕೊಡಬೇಕು? ಎಂದು ಕೇಳಿದ್ದಾಗಿ ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ