![LaxmiTai 5](https://pragativahini.com/wp-content/uploads/2024/06/Laxmi-Tai-add-5.jpg)
![GIT add 2024-1](https://pragativahini.com/wp-content/uploads/2024/04/GIT-add-2024-1.jpg)
ಪ್ರಗತಿವಾಹಿನಿ ಸುದ್ದಿ: ಮಹಾನಗರ ಪಾಲಿಕೆಯ 22ನೇ ಅವಧಿಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಚುನಾಯಿಸಲು ಜುಲೈ 2 ರಂದು ಚುನಾವಣೆ ನಡೆಸಲಾಗುವುದು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆಯ ಅಧ್ಯಕ್ಷಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಾದ ಎಸ್. ಬಿ. ಶೆಟ್ಟೆಣ್ಣವರ ತಿಳಿಸಿದ್ದಾರೆ.
![Emergency Service](https://pragativahini.com/wp-content/uploads/2023/06/IMG-20221115-WA0034.jpg)
ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಜುಲೈ 2 ರಂದು ಬೆಳಗ್ಗೆ 10 ರಿಂದ 12 ಘಂಟೆ ವರೆಗೆ ವಿವಿಧ ನಾಲ್ಕು ಸ್ಥಾಯಿ ಸಮಿತಿಗಳಿಗೆ ನಾಪಪತ್ರಗಳ ಸ್ವೀಕೃತಿ ನಡೆಯಲಿದೆ.
ಮಧ್ಯಾಹ್ನ 3 ಘಂಟೆಗೆ ಚುನಾವಣೆಯ ಪ್ರಕ್ರಿಯೆ ಸಭೆ ನಡೆಯಲಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆಯ ಅಧ್ಯಕ್ಷಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಾದ ಎಸ್. ಬಿ. ಶೆಟ್ಟೆಣ್ಣವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.