Latest

*ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ತೆಪ್ಪದಲ್ಲಿ ನದಿ ದಾಟುವಾಗ ದುರಂತಕ್ಕೀಡು: 6 ಜನರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ತೆಪ್ಪ ಮಗುಚಿ 6 ಜನರು ನೀರುಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಳಳೂತಿ ಜಾಕವೆಲ್ ಬಳಿಯ ಕೃಷ್ಣಾನದಿಯಲ್ಲಿ ನಡೆದಿದೆ.

ನದಿ ದಡದಲ್ಲಿ ಇಸ್ಪೀಟ್ ಆಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರು ಬರುತ್ತಿರುವ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ತಪ್ಪಿಸಿಕೊಳ್ಳಲೆಂದು ತೆಪ್ಪದ ಮೂಲಕ ನದಿಯ ನಡುಗಡ್ಡೆಯತ್ತ ತೆರಳಲು ಮುಂದಾಗಿದ್ದಾರೆ. ಈ ವೇಳೆ ಏಕಾಏಕಿ ತೆಪ್ಪ ನದಿಯಲ್ಲಿ ಮಗುಚಿಬಿದ್ದಿದ್ದು, 6 ಜನರು ನೀರುಪಾಲಾಗಿದ್ದಾರೆ.

ಘಟನೆಯಲ್ಲಿ 6 ಜನರು ಜಲಸಮಾಧಿಯಾಗಿದ್ದು, ಇಬ್ಬರು ಈಜಿ ದಡ ಸೇರಿದ್ದಾರೆ. ತೆಪ್ಪದಲ್ಲಿ ತೆರಳುತ್ತಿದ್ದ ಬಿರುಗಾಳಿ ಬೀಸುತ್ತಿದ್ದ ಕಾರಣಕ್ಕೆ ತೆಪ್ಪ ನೀರಿನಲ್ಲಿ ಮಗುಚಿ ಈ ದುರಂತ ಸಂಭವಿಸಿದೆ.

Home add -Advt


Related Articles

Back to top button