Belagavi NewsBelgaum NewsKannada NewsKarnataka News

*ಬೈಕ್ ಗಳ ನಡುವೆ ಅಪಘಾತ: ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಥಣಿ ತಾಲೂಕಿನ ಸವದಿ ಗ್ರಾಮದ ಬಳಿ ನಡೆದಿದೆ.

Home add -Advt

ಜಮಖಂಡಿಯಿಂದ ಸ್ವ-ಗ್ರಾಮ ಚಮಕೇರಿಗೆ ಬರುವ ಸಂದರ್ಭದಲ್ಲಿ ಮಾರ್ಗದ ಮಧ್ಯೆ ಸವದಿ ಗ್ರಾಮದ ಬಳಿ ಬೈಕ್‌ ಅಪಘಾತ ಸಂಭವಿಸಿ ಚಮಕೇರಿ ಗ್ರಾಮದ ನಿಂಗಪ್ಪ ದುಂಡಪ್ಪ ಮಂಗಳೂರು (65) ಎಂಬಾತ ಸಾವನ್ನಪ್ಪಿದ್ದಾನೆ. ಇದೇ ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button