Latest

*ಭಕ್ತರಂತೆ ಮಠಕ್ಕೆ ಬಂದು ಸ್ವಾಮೀಜಿಗೆ ಬೆದರಿಕೆ ಹಾಕಿದ ಕಳ್ಳರು; ಹಣ, ಚಿನ್ನಾಭರಣ ಕದ್ದು ಪರಾರಿ*

ಪ್ರಗತಿವಾಹಿನಿ ಸುದ್ದಿ: ಭಕ್ತರಂತೆ ಮಠಕ್ಕೆ ಬಂದ ಕಳ್ಳರ ಗುಂಪು ಸ್ವಾಮೀಜಿಗೆ ಬೆದರಿಕೆ ಹಾಕಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ನಡೆದಿದೆ.

Home add -Advt

ಮಧ್ಯರಾತ್ರಿ ದರೋಡೆಕೋರರ ಗುಂಪೊಂದು ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದಿದೆ. ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಮಲಗಿದ್ದರು. ಈ ವೇಳೆ ಸ್ವಾಮೀಜಿಯವರನ್ನು ಎಬ್ಬಿಸಿದ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಬಳಿಕ ಮಠದಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ.

ಸುಮಾರು 80 ಗ್ರಾಂ ಚಿನ್ನ, 7 ಕೆಜಿ ಬೆಳ್ಳಿ ಆಭರಣ, 20 ಲಕ್ಷ ನಗದು ಸೇರಿದಂತೆ 35 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಸಿದ್ದಲಿಂಗ ಸ್ವಾಮೀಜಿ ಲಿಂಗಸಗೂರು ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Related Articles

Back to top button