Kannada NewsKarnataka News
ಬಸ್ ಚಾಲಕ, ನಿರ್ವಾಹಕ ಇಬ್ಬರೂ ಅಂದರ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ –ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕ ಅಪ್ಪು ಶೇಖ್ ಮತ್ತು ನಿರ್ವಾಹಕ ಮಠಪತಿ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಬೇಕವಾಡ ಕ್ರಾಸ್ ಬಳಿ ವಿದ್ಯಾರ್ಥಿಗಳ ಮೇಲೆ ಬಸ್ ಹರಿಸುವ ಉದ್ಧಟತನ ಪ್ರದರ್ಶಿಸಿದ ಚಾಲಕ ಎಎಸ್.ಎಫ್.ಶೇಖ್ ಮತ್ತು ನಿರ್ವಾಹಕ ಮಠಪತಿ ಅವರನ್ನು ತಕ್ಷಣ ಬಂಧಿಸಿ, 24 ಗಂಟೆಗಳಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಮೂರ್ತಿ ಮಲ್ಲಿಕಾರ್ಜುನ ಮಡಿವಾಳ ಆದೇಶಿಸಿದ್ದರು.
ಅದರಂತೆ ನಂದಗಡ ಪೊಲೀಸ್ ಠಾಣೆಯ ಪಿಎಸ್ಐ ಸುಮಾ ನಾಯಕ ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ಚಾಲಕ ಅಪ್ಪು ಶೇಖ್ ಮತ್ತು ನಿರ್ವಾಹಕ ಮಠಪತಿಯನ್ನು ಶೋಧಿಸಿ ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ನಂದಗಡ ಪೊಲೀಸ್ ಠಾಣೆಯಲ್ಲಿ ತಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.
ಸಂಬಂಧಿಸಿದ ಸುದ್ದಿಗಳು –




