Belagavi NewsBelgaum NewsEducationKannada NewsKarnataka NewsSports

*ಶಿವಶಂಕರ ಜೊಲ್ಲೆ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ*

ಪ್ರಗತಿವಾಹಿನಿ ಸುದ್ದಿ : ಶಿವಶಂಕರ ಜೊಲ್ಲೆ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಶಾಲೆ (ಸಿ.ಬಿ.ಎಸ್.ಇ), ನಣದಿ ಕ್ಯಾಂಪಸ್‌ನಲ್ಲಿ  ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು  ಆಯೋಜಿಸಲಾಗಿತ್ತು. 

ಜೊಲ್ಲೆ ಗ್ರುಪ್‌ನ ಉಪಾಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆಯನ್ನು ನೀಡಿದರು. 

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೇಜರ್ ಧ್ಯಾನಚಂದ್ ಅವರು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘವಾದುದು. ಹಾಕಿ ಕ್ರಿಡೆಯಲ್ಲಿ ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹೀಡಿದ ಮಹಾ ಧೀಮಂತ ಕ್ರೀಡಾಪಟು ಆಗಿದ್ದಾರೆ. ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗಗಳಾಗಿವೆ. ಕ್ರೀಡೆಗಳಲ್ಲಿ ಶಿಸ್ತು, ಸಂಯಮ, ಸಮಯಪಾಲನೆ, ಸತತಾಭ್ಯಾಸ ಆತ್ಮಸ್ಥೈರ್ಯ ಅತಿ ಅವಶ್ಯಕ. ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಸಮತೋಲನವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಕ್ರೀಡೆಗಳು ಉತ್ತಮ ವ್ಯಕ್ತಿತ್ವ ನಿರ್ಮಾಣ ಹಾಗೂ  ನಾಯಕತ್ವದ ಗುಣಗಳಿಗೆ ಬುನಾದಿಯಾಗಿವೆ. ಉತ್ತಮ ನಾಯಕರು ರಾಷ್ಟç ಭವಿಷ್ಯದ ನಿರ್ಮಾಪಕರಾಗಿದ್ದಾರೆ. ಎಂದರು. 

ಕಾರ್ಯಕ್ರಮದಲ್ಲಿ ಡಾ.ಎಮ್.ಎಮ್ ಪಾಟೀಲ, ಪ್ರಾಚಾರ್ಯರಾದ ನಂದಾ ಚುನಮರಿ, ದೈಹಿಕ ಶಿಕ್ಷಕರಾದ ಶಿಕ್ಷಕರಾದ ಸಂದೀಪ ಮಗದುಮ, ಶಿವಾನಂದ ಪ್ರಭಾತ, ಶ್ಯಾಮಪ್ರಸಾದ ಮಾಸ್ತಿ  ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಾದ ಗುರುಪ್ರಸಾದ ಹಿರೇಮಠ ಸ್ವಗತಿಸಿದನು, ಸುಮಿತ ದೇಸಾಯಿ ವಂದಿಸಿದನು. ಪ್ರಾಜಕ್ತಾ ಮಾನೆ ಕಾರ್ಯಕ್ರಮ ನಿರೂಪಿಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button