Sports

*ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊತ್ತೊಂದು ಚಿನ್ನ*

ಪ್ರಗತಿವಾಹಿನಿ ಸುದ್ದಿ: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಅಥೀಟ್ ಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇದೀಗ ನಿನ್ನೆ ತಡರಾತ್ರಿ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಫೈನಲ್ ಪಂದ್ಯದಲ್ಲಿ ಭಾರತದ ಹರ್ವಿಂದರ್ ಸಿಂಗ್ ಅಮೋಘ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ನಡೆದ ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ಗೆದ್ದಿದ್ದ ಹರ್ವಿಂದರ್ ಈ ಬಾರಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದು, ಈ ಮೂಲಕ ಆರ್ಚರಿಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬುಧವಾರ ರಾತ್ರಿ ನಡೆದ ಪುರುಷರ ರಿಕರ್ವ್ ಓಪನ್ ವಿಭಾಗದ ಫೈನಲ್‌ನಲ್ಲಿ 33 ವರ್ಷ ವಯಸ್ಸಿನ ಹರ್ವಿಂದರ್, ಪೋಲೆಂಡ್‌ನ ಲುಕಾಸ್ ಸಿಸ್ಟೆಕ್ ಆಟಗಾರನನ್ನು ಸೋಲಿಸಿದರು. ಪದಕದ ಸುತ್ತಿನ ಪಂದ್ಯದಲ್ಲಿ ಹರ್ವಿಂದರ್ 28-24, 28-27, 29-25 ರಿಂದ ಪೋಲೆಂಡ್ ಆಟಗಾರನನ್ನು ಮಣಿಸಿ, 6-0ಯಿಂದ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

Home add -Advt

Related Articles

Back to top button