National

*ಕಾರು ಧ್ವಂಸಗೊಳಿಸಿದ ದಸರಾ ಆನೆ: ದಿಕ್ಕೆಟ್ಟು ಓಡಿದ ಜನ*

ಪ್ರಗತಿವಾಹಿನಿ ಸುದ್ದಿ: ದಸರಾ ಮೆರವಣಿಗೆಯ ವೇಳೆ ಆನೆಯೊಂದು ಬೀದಿಯಲ್ಲಿ ಮನಬಂದಂತೆ ಓಡಿ ಜನರ ಆತಂಕಕ್ಕೆ ಕಾರಣವಾದ ಘಟನೆ ಶನಿವಾರ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ. ವಾಹನಗಳನ್ನು ಆನೆ ಪುಡಿಗಟ್ಟುತ್ತಿರುವ ವಿಡಿಯೋಗಳನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದು ಈಗ ಎಲ್ಲೆಡೆ ವೈರಲ್ ಆಗಿದೆ.

ಮಾರುಕಟ್ಟೆ ಪ್ರದೇಶದಲ್ಲಿ ದಿಕ್ಕೆಟ್ಟು ಓಡಿದ ಆನೆ ಹಲವರಿಗೆ ಪ್ರಾಣಭೀತಿಯನ್ನೂ ಉಂಟು ಮಾಡಿತ್ತು. ಕಾರುಗಳನ್ನು ತುಳಿದು ಧ್ವಂಸಪಡಿಸಿದ ಆನೆಯನ್ನು ಎರಡು ತಾಸುಗಳ ಬಳಿಕ ಹತೋಟಿಗೆ ತರುವಲ್ಲಿ ಮಾವುತರು ಯಶಸ್ವಿಯಾಗಿದ್ದಾರೆ.

ಆನೆಯನ್ನು ನಿಯಂತ್ರಿಸಲು ಜನರು ಅದನ್ನು ಬೆನ್ನೆಟ್ಟಿ ಓಡಿದ್ದು ಇನ್ನಷ್ಟು ಅನಾಹುತಕ್ಕೆ ಕಾರಣವಾಯಿತು. ಘಟನೆ ನಡೆದ ಕೂಡಲೇ ನಾವು ಸ್ಥಳಕ್ಕೆ ಧಾವಿಸಿದೆವು. ಆದರೆ ಆನೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.‌ಸುದೈವವಶಾತ್ ಘಟನೆಯಲ್ಲಿ ಯಾವುದೇ ಜೀವಹಾನಿ ಉಂಟಾಗಿಲ್ಲ. ಆದರೆ ಆನೆ ಕೆರಳಲು ಕಾರಣವೇನೆಂದು ಇದುವರೆಗೂ ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button