Belagavi NewsBelgaum NewsKarnataka News

*ಬೆಳಗಾವಿಯಿಂದ ಈ ಭಾಗಕ್ಕೆ ಹೆಚ್ಚುವರಿ ಬಸ್‌ಗಳ ಕಾರ್ಯಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೀಪಾವಳಿ ಹಬ್ಬದ ಪ್ರಯುಕ್ತ ಬೆಳಗಾವಿ ವಾಕರಸಾ ಸಂಸ್ಥೆಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಅ.29 ರಿಂದ 31 ರವರೆಗೆ ಬೆಂಗಳೂರು, ಮುಂಬಯಿ, ಪೂನಾ ಹಾಗೂ ಪಣಜಿಗಳಿಂದ ಬೆಳಗಾವಿಗೆ ಹೆಚ್ಚಿನ ವಾಹನಗಳನ್ನು ಕಾರ್ಯಚರಣೆ ಮಾಡಲಾಗುತ್ತದೆ.

ಅದರಂತೆ ಹಬ್ಬದ ನಂತರವು ಮರಳಿ ಬೆಳಗಾವಿಯಿಂದ ಬೇರೆ ಬೇರೆ ನಗರಗಳಿಗೆ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ನ.3 ಮತ್ತು 4 ರಂದು ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದು ಎಂದು ಬೆಳಗಾವಿಯ ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button