
ಪ್ರಗತಿವಾಹಿನಿ ಸುದ್ದಿ : ಬೆಂಗಳೂರು ನಗರದ ಹೆಣ್ಣೂರಿನ ಸಮೀಪ ಬಾಬುಸಾಬ್ ಪಾಳ್ಯದಲ್ಲಿ 6 ಹಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಘಟನೆಗೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ರು.
ನಾನು ಮೈಸೂರಿನಲ್ಲಿದ್ದೆ ವಿಚಾರ ಗೊತ್ತಾಯ್ತು. ಡಿಸಿಪಿ ದೇವರಾಜು ಅವರು ವಿಡಿಯೋ ಕಾಲ್ ಮಾಡಿ ತೋರಿಸಿದ್ರು. ಸದ್ಯ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದೀನಿ. 60X40 ಸೈಟ್ ನಲ್ಲಿ ಆರು ಪ್ಲೋರ್ ಅಪಾರ್ಟೆಂಟ್ ಕಟ್ಟಿದ್ದಾರೆ. ಘಟನೆಗೆ ಅವೈಜ್ಞಾನಿಕ ನಿರ್ಮಾಣವೇ ಕಾರಣ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಸ್ಥಳದಲ್ಲಿ 21 ಜನ ಕೆಲಸ ಮಾಡ್ತಿದ್ರು ಎನ್ನುವ ಬಗ್ಗೆ ಮಾಹಿತಿಯಿದ್ದು, ಸದ್ಯ ಒಬ್ಬ ಮೃತ ಪಟ್ಟಿದ್ದಾನೆ, 8 ಜನರನ್ನ ರಕ್ಷಣೆ ಮಾಡಲಾಗಿದ್ದು ಇನ್ನು ಆರು ಜನರಿಗೆ ಗಾಯಗೊಂಡಿದ್ದಾರೆ. ಅದ್ರಲ್ಲಿ ಒಬ್ಬರು ಸಿರಿಯಸ್ ಆಗಿದ್ದಾನೆ ಎಂದು ಗೊತ್ತಾಗಿದೆ. ಇನ್ನು ಐದು ಜನ ಕಟ್ಟಡದೊಳಗೆ ಸಿಲುಕಿರುವ ಬಗ್ಗೆ ಮಾಹಿತಿ ಇದ್ದು ರಕಷ್ಣಾ ಕಾರ್ಯ ಮುಂದುವರೆಯಲಿದೆ ಎಂದರು.
ಈ ರೀತಿಯ ಅಕ್ರಮಗಳ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಡ್ತೀವಿ ಎಂದ ಡಿಸಿಎಂ ಡಿಕೆ ಶಿವಕುರ್ಮಾ ದುರ್ಘನಟಗೆ ಕಾರಣರಾದ ಕಟ್ಟಡ ಮಾಲೀಕ ಹಾಗೂ ಕಂಟ್ರಾಕ್ಟರ್ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಿದ್ದೀನಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ