ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೆ ಜೀವಬೆದರಿಕೆ ಹಾಕಲಾಗಿದೆ. ಮುಂಬೈ ಪೊಲೀಸರಿಗೆ ವಾಟ್ಸಾಪ್ ಮೂಲಕ ಸಂದೇಶ ರವಾನಿಸಲಾಗಿದೆ.
ಸಲ್ಮಾನ್ ಖಾನ್ ಗೆ ಬಿಷ್ಣೋಯ್ ಗ್ಯಾಂಗ್ ನಿಮ್ದಲೇ ಮತ್ತೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಕೃಷ್ಣಮೃಗ ಭೇಟೆ ವಿಚಾರವಾಗಿ ದೇವಸ್ಥಾನದಲ್ಲಿ ಕ್ಷಮೆಯಾಚಿಸಬೇಕು ಇಲ್ಲವೇ 5 ಕೋಟಿ ರೂಪಾಯಿ ಹಣ ನೀಡಬೇಕು. ಇಲ್ಲವಾದಲ್ಲಿ ಜಿವಂತವಾಗಿ ಬಿಡುವುದಿಲ್ಲ ಎಂದು ಸಲ್ಮಾನ್ ಖಾನ್ ಗೆ ಬೆದರಿಕೆಯೊಡ್ಡಲಾಗಿದೆ.
ಇದು ಒಂದು ವಾರದಲ್ಲಿ ಸಲ್ಮಾನ್ ಖಾನ್ ಗೆ ಬಂದಿರುವ ಎರಡನೇ ಬೆದರಿಕೆ ಸಂದೇಶವಾಗಿದೆ. ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಂ ಗೆ ಲಾರೆನ್ಸ್ ಬಿಷ್ಟೋಯ್ ಸಹೋದರ ಮಾತನಾಡಿದ್ದಾನೆ ಎನ್ನಲಾದ ಬೆದರಿಕೆ ಸಂದೇಶ ಬಂದಿದೆ. ಸಲ್ಮಾನ್ ಖಾನ್ ಬದುಕಬೇಕೆಂದರೆ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆಯಾಚಿಸಲಿ. ಇಲ್ಲವೇ 5 ಕೋಟಿ ರೂ ನೀಡಲಿ. ಒಂದೇವೇಳೆ ಹಾಗೆ ಮಾಡದಿದ್ದರೆ ಹತ್ಯೆ ಮಾಡುವುದಾಗಿ ನಮ್ಮ ಗ್ಯಾಂಗ್ ಸಕ್ರಿಯವಾಗಿರುವುದಾಗಿ ಹೇಳಲಾಗಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ