Belagavi NewsBelgaum NewsKarnataka News

*ವಕೀಲರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಕೋರ್ಟ್ ನಲ್ಲಿ  ಪ್ರಾಕ್ಟಿಸ್ ಮಾಡುತ್ತಿರುವ ನಕಲಿ ವಕೀಲರ ವಿರುದ್ಧ ಕ್ರಮ ಕೈಗೊಂಡು ನಿಜವಾದ ವಕೀಲರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ನ್ಯಾಯಾಲಯದ ಕಲಾಪ ಭಹಿಷ್ಕರಿಸಿ ವಕೀಲರಿಂದ ರಸ್ತೆ ತಡೆದು ಪ್ರತಿಭಟಿಸಲಾಯಿತು.

ಸೋಮವಾರ ಬೆಳಗಾವಿ ನಗರದ ಬಾರ್ ಅಸೋಸಿಯೇಷನ್ ವತಿಯಿಂದ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಕೆಲ ಕೋಟ್ಟಿ ವಕೀಲರ ವಿರುದ್ಧ ಕ್ರಮ ಕೈಗೊಂಡು ನ್ಯಾಯವಾದಿಗಳಿಗೆ ನ್ಯಾಯ ಒದಗಿಸುವಂತೆ ಅಗ್ರಹಿಸಿ ಕೋರ್ಟ್ ಕಲಾಪ ಭಹಿಷ್ಕರಿಸಿ ಘೋಷಣೆ ಕೂಗಿ ಡಿಸಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.‌

Home add -Advt

ಬೆಳಗಾವಿ ನ್ಯಾಯಾಲಯದಲ್ಲಿ ಮೂರು ಜನ ಕೊಟ್ಟಿ ವಕೀಲರು ಯಾವುದೇ ಪರೀಕ್ಷೆಯನ್ನು ಉತ್ತೀರ್ಣರಾಗದೆ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಅವರ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಆದರೆ ಕೋಟ್ಟಿ ಮಹಿಳಾ ವಕೀಲರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ದೂರುದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೂರು ನೀಡುತ್ತಲೇ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಈ ರೀತಿ ವಕೀಲರ ವಿರುದ್ಧ ಷಡ್ಯಂತ್ರ ಮಾಡುತ್ತಿರುವರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪೊಲೀಸರು ತನಿಖೆ ನಡೆಸಬಕು ಎಂದು ಆಗ್ರಹಿಸಿದರು.

Related Articles

Back to top button