National

*ಚೀನಾ ನಿರ್ಮಿತ ಪಾಕಿಸ್ತಾನದ JF-17 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ*

ಪ್ರಗತಿವಾಹಿನಿ ಸುದ್ದಿ: ಪಹೆಲ್ಗಾಮ್ ಘಟನೆಯ ಪ್ರತೀಕಾರವಾಗಿ ಭಾರತ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಚೀನಾ ನಿರ್ಮಿತ ಪಾಕಿಸ್ತಾನದ JF-17 ಯುದ್ಧ ವಿಮಾನವನ್ನು ಭಾರತ ಹೊಡೆದು ಹಾಕಿದೆ ಎಂದು ವರದಿಯಾಗಿದೆ.

ಮಾಧ್ಯಮಗಳ ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪ್ಯಾಂಪೋರ್ ಪಟ್ಟಣದಲ್ಲಿ ಜೆಟ್ ಅನ್ನು ಹೊಡೆದುರುಳಿಸಲಾಗಿದೆ.

ಚೀನಾ ನಿರ್ಮಿತ ಜೆಎಫ್-17 ಯುದ್ಧ ವಿಮಾನ ಭಾರತದ ದಾಳಿಯನ್ನು ತಡೆಯಲು ಬಂದಿತ್ತು. ಈ ಸಂದರ್ಭದಲ್ಲಿ ಭಾರತ ಕ್ಷಿಪಣಿಯನ್ನು ಹಾರಿಸಿ ಬೀಳಿಸಿದೆ.

ಜೆಎಫ್ 17 ಚೀನಾ ನಿರ್ಮಿತ ಯುದ್ಧ ವಿಮಾನವಾಗಿದೆ. ಪಾಕಿಸ್ತಾನದ ಬಳಿ 150 ಜೆಎಫ್ 17 ವಿಮಾನಗಳಿವೆ. ಈ ಹಿಂದೆ ಅಭಿನಂದನ್ ವರ್ಧಮಾನ್‌ ಅವರು ಅಮೆರಿಕದ ಎಫ್ 16 ಯುದ್ಧ ವಿಮಾನ ಹೊಡೆದು ಹಾಕಿದ್ದರು.

Home add -Advt

Related Articles

Back to top button