Politics

*ರಾಜ್ಯ ಸರ್ಕಾರ ಫೇಲ್ಯೂರ್ ಆಗಿದ್ದು ನಿಜ ಎಂದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಆರ್ ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ ರಾಜ್ಯ ಸರ್ಕಾರ ಫೇಲೂರ್ ಆಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಜಾರಕಿಹೊಳಿ, ಆರ್ ಸಿಬಿ ಕಾರ್ಯಕ್ರಮದ ಬಗ್ಗೆ ಮೊದಲೇ ಗೊಂದಲಗಳು ಇದ್ದವು. ಸರ್ಕಾರ ಫೇಲ್ಯೂರ್ ಆಗಿದ್ದು ನಿಜ. ಕಮಿಷನರ್ ಮಟ್ಟದಲ್ಲಿ ಬೇರೆಯೇ ಆಗಿದೆ. ಡಿಸಿಪಿ ಮಟ್ಟದಲ್ಲಿ ಬೇರೆಯೇ ಆಗಿದೆ. ಇನ್ಸ್ ಪೆಕ್ಟರ್ ಅವರು ಕೂಡ ಒಂದು ಪತ್ರ ಬರೆದಿದ್ದಾರೆ. ಪೊಲೀಸರು ಕೂಡ ಮತ್ತೊಂದು ಪತ್ರ ಬರೆದಿದ್ದಾರೆ ಎಂದರು.

ಎಲ್ಲಾ ನಾನು ಹೇಳಿದ ತಕ್ಷಣ ಆಗಲ್ಲ, ವರದಿ ಬರಲಿ. ಬಂದ ಬಳಿಕ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button