Belagavi NewsBelgaum NewsKannada NewsKarnataka News

*ಎಸ್.ಡಿ.ಇಂಚಲ ಹಾಗೂ ಉಳುವೀಶ ಹುಲೆಪ್ಪನವರಮಠ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುವ ಜನಾಂಗ ಸಾಹಿತ್ಯವನ್ನ ಪೋಷಿಸಿ ಬೆಳೆಸುವ ಕಾರ್ಯ ಮಾಡಬೇಕು. ಕೇವಲ ಓದಿದರೆ ನಡೆಯುವುದಿಲ್ಲ ಸಮಾಜಮುಖವಾಗಿ ಬರಿಯುವ ಕೆಲಸವು ಜರಗಬೇಕು ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ, ಡಾ. ಸಿಎಂ ತ್ಯಾಗರಾಜ್ ಹೇಳಿದರು.

ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜೂ.19ರಂದು ಎಸ್.ಡಿ.ಇಂಚಲ ಹಾಗೂ ಉಳುವೀಶ ಹುಲೆಪ್ಪನವರಮಠ ರಾಜ್ಯಮಟ್ಟದ ಕಾವ್ಯಪ್ರಶಸ್ತಿ ಪ್ರದಾನ ಸಮಾರಂಭಡಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯ ಸಾಹಿತಿ ಸುರೇಶ ರಾಜಮಾನೆ ಅವರ ‘ರಾಜಿಯಾಗದ ರಕ್ತದ ಕಣ’ ಕಾವ್ಯ ಕೃತಿಗೆ 2024ನೇ ಸಾಲಿನ ಕವಿ ಎಸ್.ಡಿ.ಇಂಚಲ ಕಾವ್ಯ ಪ್ರಶಸ್ತಿ ಹಾಗೂ ವಿಜಯಪುರ ಜಿಲ್ಲೆ ಸಿಂದಗಿಯ ಪ್ರೊ.ರಾ.ಶಿ.ವಾಡೇದ ಅವರ ‘ಎತ್ತಿನ ಬಂಡಿ’ ಕೃತಿಗೆ ಕವಿ ಉಳವೀಶ ಹುಲೆಪ್ಪನವರಮಠ ಮಕ್ಕಳ ಕಾವ್ಯ ಪ್ರಶಸ್ತಿಯನ್ನು  ಪ್ರದಾನ ಮಾಡಿ ಮಾತನಾಡಿದರು. 

ಹಿರಿಯ ಜೀವಿಗಳನ್ನು ಸ್ಮರಿಸುವ ಕೆಲಸ ಸಮಾಜದಲ್ಲಿ ಸದಾ ನಡಿಯಬೇಕು. ಎಚ್ ಡಿ ಇನ್ಸಲ್ ಹಾಗೂ ಉಳುವಿಶ್ ಹುಲೆಪ್ಪನವರ್ ಮಠ ಕುಟುಂಬದವರು ಹಾಗೂ ಅವರ ಅಭಿಮಾನಿಗಳು ಇಂದಿಗೂ ನಡೆಸಿಕೊಂಡು ಬಂದಿರುವುದು ಅಭಿಮಾನದ ಸಂಗತಿ. ಗಡಿ ಭಾಗದಲ್ಲಿ ಕನ್ನಡವನ್ನು ಕಟ್ಟಿದವರು ಎಸ್‌ಡಿ ಇಂಚಲ ಅವರು. 60ರ ದಶಕದಲ್ಲಿ ತಮ್ಮ ಕಾವ್ಯಗಳ ಮೂಲಕ ಹೊಸ ಸಂಚಲನವನ್ನೇ ಉಂಟುಮಾಡಿದರು. ಅವರ ಕಾವ್ಯ ಸಾಹಿತ್ಯ ಇಂದಿಗೂ ಕನ್ನಡಿಗರ ಮನದಲ್ಲಿ ಹೆಸರಾಗಿ ಉಳಿದಿದೆ. ಉದ್ಯೋನ್ಮುಖ ಕವಿಗಳು ಸಾಹಿತಿಗಳು ಸಾಹಿತ್ಯವನ್ನು ಉಳಿಸುವ ಕೆಲಸ ಮಾಡಬೇಕು. ಪ್ರತಿಷ್ಠಾನ ಬೆಳಗಾವಿಯಲ್ಲಿ ಕನ್ನಡ ನಾಡು ನುಡಿ ಸೇವೆಯನ್ನ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಹಂಪಿ ವಿವಿ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಸ್ಮಾರಕ ಉಪನ್ಯಾಸ ನೀಡುತ್ತಾ, ಇಂಚಲರ ಕಾವ್ಯಶಕ್ತಿ ಅಗಾಧವಾಗಿತ್ತು. ಮಕ್ಕಳ ಗೀತೆಗಳನ್ನು ಲಾವಣಿಗಳನ್ನ ಪ್ರಕೃತಿ ಪ್ರಿಯವಾದಂತಹ ಪದ್ಯಗಳನ್ನ ಬರೆಯುವುದರ ಮೂಲಕ ಗಡಿಭಾಗದಲ್ಲಿ ಕನ್ನಡವ ಕಟ್ಟುವ ಕೆಲಸವನ್ನು ಮಾಡಿದರು. 

Home add -Advt

ಅವರ ಸಾಹಿತ್ಯ ಜೀವನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಅಂತೆ ಉಳಿವಿಷರು ತಮ್ಮ ಕಾವ್ಯ ಸಾಹಿತ್ಯದ ಮೂಲಕ ಮಕ್ಕಳ ಮನಸ್ಸನ್ನು ಅರಳಿಸಿದರು. ಅಸಂಖ್ಯಾ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿ ಅವರ ಬದುಕಿಗೆ ಬೆಳಕಾದರು. ಇಂತಹ ಕವಿಗಳನ್ನ ಪಡೆದ ಬೆಳಗಾವಿ ಜಿಲ್ಲೆ ಹೆಮ್ಮೆ ಪಡುವಂತಾಗಿದೆ. ಅವರ ಸ್ಮರಣೆ ಉದ್ಯೋನ್ಮುಖ ಸಾಹಿತ್ಯಕ್ಕೆ ಒಂದು ವೇದಿಕೆಯಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಡಾ.ಗುರುದೇವಿ ಹುಲೆಪ್ಪನವರಮಠ ವಹಿಸಿದ್ದರು. ಹಿರಿಯ  ಸಾಹಿತಿ ಪಿ.ಬಿ.ಎಸ್.ಗವಿಮಠ, ಡಾ.ಬಸವರಾಜ ಜಗಜಂಪಿ, ಡಾ.ಸರಜೂ ಕಾಟ್ಕರ ಈ ಸಂದರ್ಭದಲ್ಲಿ ಮಾತನಾಡಿದರು. 

ಶಿರೀಶ್ ಜೋಶಿ ಸ್ವಾಗತಿಸಿ ಪ್ರಸ್ತಾವಿಕ ನುಡಿ ಹೇಳಿದರು. ಶ್ರೀಕಾಂತ್ ಶಾನವಾಡ ನಿರೂಪಿಸಿದರು. ಬಸವರಾಜ ಗಾರ್ಗಿ ವಂದಿಸಿದರು. ಆಶಾ ಯಮಕನಮರಡಿ ಪ್ರಾರ್ಥಿಸಿದರು. ಡಾಕ್ಟರ್ ಎಫ್ ವಿ ಮಾನ್ವಿ, ಡಾಕ್ಟರ್ ಎಚ್ ಬಿ ರಾಜಶೇಖರ್, ವಿವಿ ಹಡಿಗನಾಳ, ಎಂಎಸ್ ಇಂಚಲ್, ಪ್ರೊಫೆಸರ್ ಎಸ್ ಎನ್ ಮೂಲಿಮನಿ, ಲಿಂಗರಾಜ್ ಅಂಗಡಿ, ಡ. ಹನುಮಂತ ಮೇಲಿನಮನಿ, ಡಾಕ್ಟರ್ ರಾಮಕೃಷ್ಣ ಮರಾಠೆ, ವೈ ಎಸ್ ಪಾಟೀಲ್, ಡಾ.ಮಹೇಶ ಗುರನಗೌಡರ, ಶಿವಾನಂದ ಹುಲೆಪ್ಪನವರಮಠ, ರಾಮಚಂದ್ರ ಕಟ್ಟಿ,  ವಿನಿತಾ ಹಂಚಿನಮನಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button