Kannada NewsKarnataka NewsLatest

*ಭೀಕರ ಅಪಘಾತ: ಯುವವೈದ್ಯೆ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಭೀಕರ ಅಕಾರು ಅಪಘಾತದಲ್ಲಿ ಯುವ ವೈದ್ಯೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Home add -Advt

ಶಿವಮೊಗ್ಗ ಜಿಲ್ಲೆತ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಬಳಿ ಈ ದುರಂತ ಸಂಭವಿಸಿದೆ. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ನಿವಾಸಿ ಡಾ.ಸನಾ (22) ಮೃತ ವೈದ್ಯೆ.

ಸನಾ, ಡಾ.ಶಕಿಲ್ ಹಾಗೂ ಡಾ. ತಾಹೇರಾ ವೈದ್ಯ ದಂಪತಿಯ ಪುತ್ರಿ. ಕಳೆದ ತಿಂಗಳ ಹಿಂದಷ್ಟೇ ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಪದವಿ ಪಡೆದಿದ್ದರು. ಇದೀಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Related Articles

Back to top button