
ಪ್ರಗತಿವಾಹಿನಿ ಸುದ್ದಿ: ಹಾಸ್ಯ ನಟ ದಿ. ಬುಲೆಟ್ ಪ್ರಕಾಶ್ ಮಗ ರಕ್ಷಕ ಅವರು ತಮ್ಮ ಕಾರ್ ನಿಂದ ಬೈಕ್ ಸಾವಾರನಿಗೆ ಹೋಗಿ ಗುದ್ದಿ, ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ.
ಬೇಕಾಬಿಟ್ಟಿ ಥಾರ್ ಜೀಪ್ ಅನ್ನು ಚಲಾಯಿಸಿದ ರಕ್ಷಕ್ ಬುಲೆಟ್ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಅಪಘಾತ ಮಾಡಿದ್ದು ಅವರೀಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಅಪಘಾತದ ತೀವ್ರತೆಗೆ ಅವರ ಕಾಲಿನ ಮೂಳೆ ಮುರಿದಿದೆ.
ರಕ್ಷಕ್ ಬುಲೆಟ್ ಮಾನ್ಯತಾ ಟೆಕ್ ಪಾರ್ಕ್ ಬಳಿಯಿರುವ ಶಿವರಾಜ್ ಕುಮಾರ್ ಅವರ ನಿವಾಸದ ಬಳಿ ತನ್ನ ಸ್ನೇಹಿತರೊಡನೆ ಥಾರ್ ಜೀಪ್ ಅನ್ನು ವೇಗವಾಗಿ ಕೊಂಡೊಯ್ಯುತ್ತಿದ್ದರು. ಈ ವೇಳೆ ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಸಾಗುತ್ತಿದ್ದ ವೇಣುಗೋಪಾಲ ಎಂಬ ಯುವಕನ ದ್ವಿಚಕ್ರ ವಾಹನಕ್ಕೆ ರಕ್ಷಕ್ ಬುಲೆಟ್ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದಿದ್ದರು.
ಶಿಡ್ಲಘಟ್ಟ ಮೂಲದ ವೇಣುಗೋಪಾಲ ತನ್ನ ಸ್ನೇಹಿತರೊಂದಿಗೆ ಸಾಗುತ್ತಿದ್ದಾಗ ಈ ಅವಘಡ ನಡೆದಿತ್ತು. ಕೂಡಲೇ ಅವರನ್ನು ಹೆಬ್ಬಾಳದ ಬಳಿಯಿರುವ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.