
ಪ್ರಗತಿವಾಹಿನಿ ಸುದ್ದಿ: ಮೂವರು ಬಾಲಕಿಯರು ತುಂಬಾ ಸುಂದರವಾಗಿದ್ದಾರೆ ಎಂಬ ಕಾರಣಕ್ಕೆ ಕ್ರೂರಿ ಮಹಿಳೆಯೊಬ್ಬಳು ಮೂವರನ್ನೂ ಕೊಲೆಗೈದಿರುವ ವಿಚಿತ್ರ ಘಟನೆ ಹರಿಯಾಣದಲ್ಲಿ ನಡೆದಿದೆ.
32 ವರ್ಷದ ಪೂನಂ ಎಂಬ ಮಹಿಳೆ ಮೂವರು ಬಾಲಕಿಯನ್ನು ಹತ್ಯೆಗೈದು ಆಕಸ್ಮಿಕ ಸಾವು ಎಂದು ಬಿಂಬಿಸಿದ್ದಾಳೆ. ಮೂವರು ಹುಡುಗಿಯರು ತುಂಬಾ ಸುಂದರವಾಗಿದ್ದಾರೆ ಎಂಬುದನ್ನು ಸಹಿಸಲು ಸಾಧ್ಯವಾಗದೇ ಮತ್ಸರದಿಂದ ಮಹಿಳೆ ಈ ಕೃತ್ಯವೆಸಗಿದ್ದಾಳೆ.
ಮೂವರು ಬಾಲಕಿಯರು ಮಹಿಳೆಯರ ಸಂಬಂಧಿಕರು. ಆರು ವರ್ಷದ ಸೋದರ ಸಂಬಂಧಿ ಬಾಲಕಿ ಹಾಗೂ ಇಬ್ಬರು ಇತರ ಬಾಲಕಿಯರನ್ನು ಮಹಿಳೆ ಕೊಲೆಗೈದಿದ್ದಾಳೆ. ಪಾಣಿಪತ್ ಜಿಲ್ಲೆಯ ನೌಲ್ತಾ ಗ್ರಾಮದ ಮದುವೆ ಮನೆಯಲ್ಲಿ ಆರು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಳು. ಬಾಲಕಿ ಶವ ಮೊದಲ ಮಹಡಿಯ ಸ್ಟೋರ್ ರೂಮ್ ನಲ್ಲಿದ್ದ ನೀರು ತುಂಬಿದ್ದ ಟಬ್ ನಲ್ಲಿ ಪತ್ತೆಯಾಗಿದೆ. ಅನುಮಾನಗೊಂದ ಪೊಲೀಸರು ಬಾಲಕಿಯ ಚಿಕ್ಕಮ್ಮ ಪೂನಂನನ್ನು ಬಂಧಿಸಿ ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ವಿಚಾರಣೆ ವೇಳೆ ಮಹಿಳೆ 6 ವರ್ಷದ ಬಾಲಕಿ ಮಾತ್ರವಲ್ಲ 2023ರಲ್ಲಿ ತನ್ನ ಅತ್ತಿಗೆಯ ೯ ವರ್ಷದ ಮಗಳು, ಮತ್ತೋರ್ವ ಬಾಲಕಿಯನ್ನು ಹತ್ಯೆಗೈದಿದ್ದಾಗಿ ಹಾಗೂ ತನ್ನದೇ ಮೂರು ವರ್ಷದ ಮಗನನ್ನು ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಸುಂದರವಾಗಿರುವವರನ್ನು ಕಂಡರೆ ಮಹಿಳೆಗೆ ಅಸೂಯೆಯಾಗುತ್ತಿತ್ತಂತೆ ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ.



