Kannada NewsKarnataka NewsLatest

ರಾಜ್ಯದಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬುಧವಾರದ ಭಾರತ್ ಬಂದ್, ಮುಷ್ಕರಕ್ಕೆ ಕರ್ನಾಟಕದಲ್ಲಿ ನೀರಸ ಪರತಿಕ್ರಿಯೆ ವ್ಯಕ್ತವಾಗಿದೆ.

ಕೆಲವು ಜಿಲ್ಲೆಗಳಲ್ಲಿ ಸಿಐಟಿಯು ನೇತೃತ್ವದಲ್ಲಿ ಕೆಲವು ಕಾರ್ಮಿಕ ಸಂಘಟನೆಗಳು, ಅಂಗನವಾಡಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು ಬಿಟ್ಟರೆ ಎಲ್ಲೂ ಬಂದ್ ಅಥವಾ ಮುಷ್ಕರದ ಬಿಸಿ ತಟ್ಟಿಲ್ಲ.  ಮಡಿಕೇರಿಯಲ್ಲಿ ಕೆಲವು ಕಿಡಿಗೇಡಿಗಳು ಬಸ್ ಗೆ ಕಲ್ಲು ತೂರಿದ್ದಾರೆ. ಆದರೆ ಅಂತಹ ಅನಾಹುತ ಸಂಭವಿಸಲಿಲ್ಲ.

ಉಳಿದಂತೆ ರಾಜ್ಯಾದ್ಯಂತ ಸಂಚಾರ ವ್ಯವಸ್ಥೆ ಎಂದಿನಂತೆಯೇ ಇತ್ತು. ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು, ಆಟೋ ರಿಕ್ಷಾ, ಟೆಂಪೋ ಸೇರಿದಂತೆ ಖಾಸಗಿ ವಾಹನಗಳು ಎಂದಿನಂತೆ ಓಡಾಡಿದವು. ಜನಜೀವನ, ಮಾರುಕಟ್ಟೆ ಎಲ್ಲವೂ ಸಹಜವಾಗಿಯೇ ಇತ್ತು. ಶಾಲೆ ಕಾಲೇಜುಗಳು ಕೂಡ ಯಾವುದೇ ವ್ಯತ್ಯಯವಿಲ್ಲದೆ ನಡೆದವು.

ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘಟನೆ ಎಐಟಿಯುಸಿ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿತು. ಸಾರಿಗೆ ಬಸ್ ಸೇರಿದಂತೆ ಎಲ್ಲ ವಾಹನ ಸಂಚಾರ ಸಹಜವಾಗಿಯೇ ಇದ್ದವು. ಜನಜೀವನ, ವ್ಯಾಪಾರ ವಹಿವಾಟು ಕೂಡ ಎಂದಿನಂತೆಯೇ ಇತ್ತು.

ಬಂದ್ ಹಾಗೂ ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟು ನಿಟ್ಟಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೆ ಎಲ್ಲೂ ಅಹಿತಕರ ಘಟನೆ ವರದಿಯಾಗಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button