Kannada NewsKarnataka NewsLife StyleNationalPolitics

*77ನೇ ಗಣರಾಜ್ಯೋತ್ಸವ: ಶೌರ್ಯ ಮತ್ತು ಸೇವಾ ಪದಕಗಳಿಗೆ 982 ಸಿಬ್ಬಂದಿಗೆ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ನಾಳೆ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಕೊಡಮಾಡುವ ಶೌರ್ಯ ಮತ್ತು ಸೇವಾ ಪದಕಗಳಿಗೆ 982 ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವೆಗಳ ಸಿಬ್ಬಂದಿಯನ್ನ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ

982 ಪದಕಗಳಲ್ಲಿ 125 ಶೌರ್ಯ ಪದಕಗಳು ಸೇರಿವೆ. ಮುಖ್ಯವಾಗಿ ಜಮ್ಮು ಕಾಶ್ಮೀರದ ನಕ್ಸಲ್‌ ಪೀಡಿತ ಹಿಂಸಾಚಾರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ 35, ಶಸ್ತ್ರಾಸ್ತ್ರ ಕಾರ್ಯಾಚರಣೆಯಲ್ಲಿ ನಿಯೋಜಿಸಲಾದ 45 ಹಾಗೂ ಈಶಾನ್ಯ ಪ್ರದೇಶದಲ್ಲಿ ನಿಯೋಜಿಸಲಾದ ಐವರು ಸಿಬ್ಬಂದಿ ಶೌರ್ಯ ಪದಕಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ನಾಲ್ವರಿ ಅಗ್ನಿಶಾಮಕ ಸಿಬ್ಬಂದಿ ಕೂಡ ಶೌರ್ಯ ಪದಕಕ್ಕೆ ಭಾಜನರಾಗಿದ್ದಾರೆ. 

ಈ ಬಾರಿ ಶೌರ್ಯ ಮತ್ತು ಸೇವಾ ಪದಕಗಳಿಗೆ ಆಯ್ಕೆಯಾದವರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅತಿಹೆಚ್ಚು (33) ಶೌರ್ಯ ಪದಕಗಳನ್ನ ಪಡೆದುಕೊಂಡಿದ್ದಾರೆ. 

2ನೇ ಸ್ಥಾನದಲ್ಲಿ ಮಹಾರಾಷ್ಟ್ರ ಪೊಲೀಸರು (31) ಇದ್ದಾರೆ. ಉತ್ತರ ಪ್ರದೇಶ ಪೊಲೀಸ್‌ (18), ದೆಹಲಿ ಪೊಲೀಸ್‌ (14) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದರ ಹೊರತಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) 12 ಪದಕ ಶೌರ್ಯ ಪ್ರಶಸ್ತಿಗಳನ್ನ ಪಡೆದ ಏಕೈಕ ಪಡೆ CRPF ಆಗಿದೆ.

Home add -Advt

ಈ ಬಾರಿ ಘೋಷಣೆ ಮಾಡಲಾದ ಪಟ್ಟಿಯಲ್ಲಿ ಒಟ್ಟು 101 ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (PSM) ಹಾಗೂ 756 ವಿಶಿಷ್ಟ ಸೇವಾ ಪದಕ (MSM) ಸಹ ಸೇರಿವೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.

Related Articles

Back to top button