Belagavi NewsBelgaum NewsCrimeKannada NewsKarnataka NewsLatest
*ರಸ್ತೆಬದಿ ಕುಳಿತಿದ್ದ ವ್ಯಕ್ತಿಯ ಮೇಲೆ ಹರಿದ ಟ್ರ್ಯಾಕ್ಟರ್: ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಸ್ತೆಬದಿ ಕುಳಿತಿದ್ದ ವ್ಯಕ್ತಿ ಮೇಲೆ ಟ್ರ್ಯಾಕ್ಟರ್ ಹಾಯ್ದು ವ್ಯಕ್ತಿ ಮೃತ ಪಟ್ಟಿರುವ ಘಟನೆ ನಡೆದಿದೆ.
ಬೆಳಗಾವಿಯ ಅಥಣಿ-ಹಾರುಗೇರಿಯಲ್ಲಿ ಈ ದುರಂತ ಸಂಭವಿಸಿದೆ. ಲಕ್ಷ್ಮಣ ಬಸಪ್ಪ ನಾವಿ (45) ಮೃತ ವ್ಯಕ್ತಿ. ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಅಭಿನಂದನ ತಾತ್ಯಾಸಾಬ ಬಾಳಿಕಾಯಿ ಎಂಬಾತ ಲ ನಡೆಸುತ್ತಿದ್ದ ಟ್ರಾಕ್ಟರ್ ಹಾರೂಗೇರಿ ಕಡೆಯಿಂದ ಅಥಣಿ ಕಡೆಗೆ ತೆರಳುತ್ತಿದ್ದಾಗ ಬಂದು ರಸ್ತೆ ಬದಿಗೆ ಕುಳಿತಿದ್ದ ಲಕ್ಷ್ಮಣ ಬಸಪ್ಪ ನಾವಿ ಮೇಲೆ ಹಾಯಿಸಿದ್ದಾನೆ.
ಈ ವೇಳೆ ಮೃತ ಬಸಪ್ಪನ ತಲೆಗೆ ಮುಖಕ್ಕೆ ಎಡಗಾಲ ಮೊಣಕಾಲಿಗೆ ಬಾರಿ ಗಾಯ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಅಥಣಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.



