Kannada NewsKarnataka NewsLatest

*ಕಾಲುವೆಗೆ ಜಾರಿ ಬಿದ್ದ ಮಗನನ್ನು ರಕ್ಷಿಸಲು ಹೋದ ತಂದೆಯೂ ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಕಾಲುವೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ನೀರುಪಾಅಲಾಗಿದ್ದು, ತಂದೆ-ಮಗ ಇಬ್ಬರೂ ಕಾರಂಜಾ ಡ್ಯಾಂ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಾರಂಜಾ ಡ್ಯಾಂ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಹಳ್ಳಿಖೇಡ್(ಬಿ) ಗ್ರಾಮದ ವಿಶ್ವನಾಥ(50) ಮತ್ತು ಅಮರೇಶ(23) ಮೃತ ತಂದೆಮಗ.

ಬೀದರ್‌ನಲ್ಲಿ ಸಿಮೆಂಟ್ ಖಾಲಿ ಮಾಡಿ ಊರಿಗೆ ಹೋಗುತ್ತಿದ್ದ ವೇಳೆ ಕಾಲುವೆ ಕಾಣುತ್ತಿದ್ದಂತೆ ಮಗ ಅಮರೇಶ್ ಕೈಕಾಲು ತೊಳೆದುಕೊಳ್ಳಲೆಂದು ಕಾಲುವೆಗೆ ಇಳಿದಿದ್ದ. ಈ ವೇಳೆ ಕಾಲು ಜಾರಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದಿದ್ದಾನೆ. ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಂದೆ ವಿಶ್ವನಾಥ್ ಕೂಡಲೇ ಆತನ ರಕ್ಷಣೆಗೆಂದು ಕಾಲುವೆ ಹಾರಿದ್ದಾರೆ. ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಧನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Home add -Advt

Related Articles

Back to top button