Kannada NewsPoliticsWorld

*ಅತೀ ದೊಡ್ಡ ಗ್ಯಾಸ್ ಉತ್ಪಾದನಾ ಘಟಕದ ಮೇಲೆ ಇರಾನ್ ದಾಳಿ*

ಪ್ರಗತಿವಾಹಿನಿ ಸುದ್ದಿ: ಕತಾರ್‌ನ ರಾಸ್ಲಾಫಾನ್ ಇಂಡಸ್ಟ್ರಿಯಲ್ ಸಿಟಿಯಲ್ಲಿ ಇರುವ ಪ್ರಮುಖ ಗ್ಯಾಸ್‌ ಉತ್ಪಾದನಾ ಘಟಕದ ಮೇಲೆ ಇರಾನ್  ಕ್ಷಿಪಣಿ ದಾಳಿ ನಡೆಸಿದೆ. ಸದ್ಯ ಕ್ಷಿಪಣಿ ದಾಳಿಯ ವೇಳೆ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ಅವುಗಳನ್ನು ಹೊಡೆದುರುಳಿಸುವಲ್ಲಿ ಕತಾರ್ ಯಶಸ್ವಿಯಾಗಿದೆ.

ಘಟನೆಯ ವೇಳೆ, ಹಲವಾರು ಕ್ಷಿಪಣಿ ಹಾರಿಬಂದಿದ್ದು ಅವುಗಳನ್ನು ಕತಾರ್ ತನ್ನ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ಆಯಿಲ್ ರಿಫೈನರಿಯ ಒಂದು ಭಾಗಕ್ಕೆ ಹಾನಿಯಾಗಿದ್ದು, ಅಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. 

ಕತಾರ್‌ನ ಮೆಸಾಯೀದ್ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಮೆಸಾಯೀದ್ ಹೋಲ್ಡಿಂಗ್ ಕಂಪನಿ, ರಾಸ್ ಲಾಫ್ಘಾನ್ ರಿಫೈನರಿ, ಸೌದಿ ಅರೇಬಿಯಾದ ಸಾಮ್ರಫ್ ರಿಫೈನರಿ ಮತ್ತು ಜುಬೈಲ್ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಯುನೈಟೆಡ್ ಅರೆಬ್ ಎಮಿರೇಟ್ಸ್ನ ಅಲ್ ಹೋಸ್ಟ್ ಇಂಧನ ಉತ್ಪಾದನಾ ಘಟಕಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ.

ಘಟನೆಯ ನಂತರ ಕತಾರ್ ವಿದೇಶಾಂಗ ಸಚಿವಾಲಯವು ಇರಾನ್ ದೂತಾವಾಸದ ಸೈನಿಕ ಮತ್ತು ಭದ್ರತಾ ಸಿಬ್ಬಂದಿಯನ್ನು 24 ಗಂಟೆಗಳಲ್ಲಿ ಕತಾರ್ ತೊರೆಯುವಂತೆ ಆದೇಶಿಸಿದೆ. ಕತಾರ್ ಈ ದಾಳಿಯನ್ನು ತನ್ನ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ನೇರ ಹೊಡೆತ ಎಂದು ಕತಾರ್‌ ಹೇಳಿದೆ.

Home add -Advt

ಈ ಘಟಕವು ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ (LNG) ಮತ್ತು ಇಂಧನ ಉತ್ಪಾದಿಸುವ ಪ್ರಮುಖ ರಿಫೈನರಿಗಳನ್ನು ಹೊಂದಿದ್ದು ಜಗತ್ತಿನಾದ್ಯಂತ ಹಲವು ದೇಶಗಳಿಗೆ ಇಂಧನ ಪೂರೈಸುತ್ತದೆ. ಯುಎಸ್ ಮತ್ತು ಇಸ್ರೇಲ್ ಇರಾನ್‌ನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಈ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯನ್ನು ಹೆಚ್ಚಿಸಿದೆ. ಈ ಘಟನೆ ಯೂರೋಪ್ ಹಾಗೂ ಗ್ಲೋಬಲ್ ಎನರ್ಜಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಘಟನೆಯ ನಂತರ ಅನೇಕ ರಾಷ್ಟ್ರಗಳು ತಮ್ಮ ಎನರ್ಜಿ ಘಟಕಗಳನ್ನು ಮುಚ್ಚುವಂತೆ ಸೂಚನೆ ನೀಡಿವೆ.

Related Articles

Back to top button