*ಬೆಳಗಾವಿಯಲ್ಲಿ ಉದ್ಯಮ- ಉದ್ಯಮಿ ಎರಡೂ ಬಲವರ್ಧನೆ ಅಗತ್ಯ* *ಸರಕಾರ ಸ್ಪಂದಿಸಬೇಕಾದರೆ ನಮ್ಮ ಧ್ವನಿ ದೊಡ್ಡದಾಗಬೇಕು* : *ಬೆಲೆಕ್ಸ್ ಉದ್ಘಾಟನೆ ವೇಳೆ ಗಣ್ಯರ ಅಭಿಮತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಯಲ್ಲಿ ಉದ್ಯಮಗಳು ಬೆಳೆಯಬೇಕು. ಉದ್ಯಮಿಗಳು ಬೆಳವಣಿಗೆ ಹೊಂದಬೇಕಾದರೆ ಇಲ್ಲಿರುವ ಸಮಸ್ಯೆಗಳು ನಿವಾರಣೆಯಾಗಬೇಕು. ಅದಕ್ಕೆ ಉದ್ಯಮಿಗಳು ಒಂದಾಗಿ ಗಟ್ಟಿ ಧ್ವನಿ ಎತ್ತಬೇಕು ಎನ್ನುವ ಒಕ್ಕೊರಲ ಅಭಿಪ್ರಾಯ, ಮಂಗಳವಾರ ಆರಂಭವಾದ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನದ ಉದ್ಘಾಟನೆ ಸಮಾರಂಭದ ವೇಳೆ ವ್ಯಕ್ತವಾಯಿತು.
ಬೆಳಗಾವಿ ವಾಣಿಜ್ಯೋದ್ಯಮ ಸಂಘದ ವತಿಯಿಂದ ಫೌಂಡ್ರಿಕ್ಲಸ್ಟರ್ ಆವರಣದಲ್ಲಿ 3 ದಿನಗಳ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನ ಬೆಲೆಕ್ಸ್ – 2026 ಆಯೋಜಿಸಲಾಗಿದ್ದು, ಉದ್ಘಾಟನೆ ಸಮಾರಂಭ ಇಲ್ಲಿಯ ಉದ್ಯಮಗಳ ಬೆಳವಣಿಗೆಗೆ ಹಿನ್ನಡೆಯಾಗಿರುವ ಅಂಶಗಳ ಕುರಿತು ಗಮನ ಸೆಳೆಯುವಂತೆ ಮಾಡಿತು.

ಆರಂಭದಲ್ಲಿ ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ಬೆಳೆಯುತ್ತಿದೆ. ಆದರೆ ಸರಕಾರದ ಅಸಹಕಾರದಿಂದ ಕೈಗಾರಿಕೆಗಳು ಬೆಳೆಯುತ್ತಿಲ್ಲ. ಬಿಯಾಂಡ್ ಬೆಂಗಳೂರು ಹುಬ್ಬಳ್ಳಿಯವರೆಗೆ ನಿಲ್ಲುತ್ತಿದೆ. ಉದ್ಯಮಿಗಳು ಶಕ್ತಿ ತೋರಿಸುವವರೆಗೆ, ನೀವು ಒಟ್ಟಾಗುವವರೆಗೆ ಯಾವುದೇ ಸರಕಾರವಿರಲಿ ಕಣ್ಣೆತ್ತಿ ನೋಡುವುದಿಲ್ಲ ಎಂದು ಹೇಳಿದರು.
ಬೆಳಗಾವಿಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತು ಕೈಗಾರಿಕೆಗಳಿಗೆ ಪೂರಕವಾಗಿ ಮೂಸಭೂತ ಸೌಲಭ್ಯಗಳ ಸೃಷ್ಟಿಗೆ ತಾವು ಹೊಂದಿರುವ ಕನಸುಗಳನ್ನು ಬಿಚ್ಚಿಟ್ಟ ಅವರು, ಇಎಸ್ಐ ಆಸ್ಪತ್ರೆ ಕಾರ್ಮಿಕರು ಹೆಚ್ಚಾಗಿರುವ ದಕ್ಷಿಣದಲ್ಲಿ ಆಗಬೇಕು. ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಹೊರತುಪಡಿಸಿ ಎಲ್ಲವೂ ಉತ್ತರ ಭಾಗದಲ್ಲಿದೆ. ಬೆಳಗಾವಿಯಲ್ಲಿ ದೊಡ್ಡ ದೊಡ್ಡ ಉದ್ಯಮಗಳು ಬಂದು ಇಲ್ಲಿನ ಯುವಕರು ಇಲ್ಲಿಯೇ ತಂದೆ ತಾಯಿಗಳ ಜೊತೆ ಇದ್ದು ಉದ್ಯೋಗ ಮಾಡಬೇಕೆನ್ನುವ ಕನಸಿನೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ನಾನು ಸದಾ ನಿಮ್ಮ ಜೊತೆ ಇರುತ್ತೇನೆ. ಉದ್ಯಮಬಾಗದಿಂದಾಗಿ ಬೆಳಗಾವಿಗೆ ಶಕ್ತಿ ಬಂದಿದೆ. ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಪ್ರಯತ್ನ ಆರಂಭವಾಗಿದೆ. ಎಲ್ಲದಕ್ಕೂ ಎಲ್ಲರ ಸಹಕಾರ ಅಗತ್ಯ. ನೀವೆಲ್ಲ ಒಂದಾದರೆ ಉದ್ಮಗಳನ್ನು, ಉದ್ಯಮಿಗಳನ್ನು ಬೆಳೆಸಬಹುದು ಎಂದು ಅಭಯಟ ಪಾಟೀಲ ಹೇಳಿದರು.

ಖ್ಯಾತ ಉದ್ಯಮಿ, ಅಶೋಕ ಐರನ್ ಚೇರಮನ್ ಜಯಂತ ಹುಂಬರವಾಡಿ ಮಾತನಾಡಿ, ಹಲವು ವರ್ಷಗಳ ನಂತರ ಇಂತಹ ಪ್ರದರ್ಶನ ನಡೆಯುತ್ತಿದೆ. ಇದು ಮುಂದುವರಿಯಬೇಕು. ಬಿಯಾಂಡ್ ಬೆಂಗಳೂರು ಯೋಜನೆಯಡಿ ಸರಕಾರ ಹುಬ್ಬಳ್ಳಿ- ಧಾರವಾಡ -ಬೆಳಗಾವಿ ಕ್ಲಸ್ಟರ್ ಆಗಿ ಬೆಳೆಸಲು ಯೋಜನೆ ಹೊದಿದೆ. ಆದರೆ ಇಲ್ಲಿನ ಉದ್ಯಮಿಗಳು ದೊಡ್ಡ ದ್ವನಿ ಎತ್ತುತ್ತಿಲ್ಲ ಎಂದರು.
ಬಹುರಾಷ್ಟ್ರೀಯ ಕಂಪನಿಗಳಿಗೆ ಆದ್ಯತೆ ಸಿಗುತ್ತಿದೆ, ಭಾರತೀಯ ಸಂಸ್ಥೆಗಳಿಗೆ ಗೌರವ ಇಲ್ಲ. ಸರಕಾರ ಮತ್ತು ಅಧಿಕಾರಿಗಳ ಅಸಹಕಾರ ನೀತಿಯಿಂದಾಗಿ ಇಲ್ಲಿನ ಉದ್ಯಮಿಗಳು ದ್ವನಿ ಕಳೆದುಕೊಂಡಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಯಾವಾಗ ನೋಡಿದರೂ ಸರ್ವರ್ ಡೌನ್ ಇರುತ್ತದೆ. ಸರಿಯಾದ ಜಾಗ ಸಿಗುತ್ತಿಲ್ಲ, ಸೌಲಭ್ಯಗಳು ಸಿಗುತ್ತಿಲ್ಲ, ಸಹಕಾರ ಸಿಗುತ್ತಿಲ್ಲ. ಇಂತಹ ಸಮಸ್ಯೆಗಳ ನಡುವೆ ಉದ್ಯಮ ಬೆಳೆಯಲು ಸಾಧ್ಯವಿಲ್ಲ. ಧೈರ್ಯದಿಂದ ಮಾತನಾಡುವವರೆಗೆ ಯಾರೂ ನೋಡುವುದಿಲ್ಲ. ನಾವು ಉದ್ಯೋಗ ಸೃಷ್ಟಿಸಿರುವಾಗ, ತೆರಿಗೆ ತುಂಬುವಾಗ ಯಾರಿಗೂ ಹೆದರುವ ಅಗತ್ಯವಿಲ್ಲ, ಎಲ್ಲರೂ ಒಂದಾಗಿ ಧ್ವನಿ ಎತ್ತಬೇಕು. ಉದ್ಯಮಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಎಂದು ಹುಂಬರವಾಡಿ ಹೇಳಿದರು.
ಬಿಸಿಸಿಐ (BCCI) ಈಗ ಕೈಗಾರಿಕೆಗಳನ್ನು ಪ್ರೇರೇಪಿಸುವುದರಿಂದ ಮುಂದೆ ಹೋಗಿ ಅವುಗಳನ್ನು ಪ್ರದರ್ಶಿಸುವ ಹಂತಕ್ಕೆ ಬಂದಿದೆ. ಬೆಳಗಾವಿ ನಗರ ಆಧಾರಿತ ದೃಷ್ಟಿಕೋನದಿಂದ ಕ್ಲಸ್ಟರ್ ಆಧಾರಿತ ಕೈಗಾರಿಕಾ ದೃಷ್ಟಿಗೆ ಹೋಗಬೇಕು. ಇವಿ (EV), ಏರೋಸ್ಪೇಸ್, ಗ್ಲಾಸ್, ಎಫ್‌ಎಂಸಿಜಿ ಕ್ಷೇತ್ರಗಳಿಗೆ ಒತ್ತು ನೀಡಬೇಕು ಎಂದರು.
ಮಹಾರಾಷ್ಟ್ರ ಜೈನ್ ಅಲ್ಪಸಂಖ್ಯಾತರ ಹಣಕಾಸು ಅಭಿವೃದ್ಧಿ ನಿಗಮದ ಚೇರಮನ್ ಲಲಿತ್ ಗಾಂಧಿ ಮಾತನಾಡಿ, ಇಂತಹ ಪ್ರದರ್ಶನ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಲಿದೆ. ಉದ್ಯಮಿಗಳು ಉದ್ಯೋಗ ಸೃಷ್ಟಿಸುತ್ತಾರೆ, ತೆರಿಗೆ ಕಟ್ಟುತ್ತಾರೆ. ಆದರೆ ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಸಹಕಾರ ಸಿಗುವುದಿಲ್ಲ. ಸಂಘಟಿತರಾಗಿ ಸರಕಾರದಿಂದ ಸಹಕಾರ ಪಡೆಯಬೇಕು ಎಂದರು.
ಮಹಾರಾಷ್ಟ್ರ ದಲ್ಲಿ 26 ಹೊಸ ಇಂಡಸ್ಟ್ರಿಯಲ್ ಎಸ್ಟೇಟ್ ಆರಂಭಿಸಲಾಗುತ್ತಿದೆ. ಅಲ್ಲಿನ ಇಂಡಸ್ಟ್ರಿಯಲ್ ಪಾಲಿಸಿ ತಕ್ಕ ಮಟ್ಟಿಗೆ ಉತ್ತಮವಾಗಿದೆ. ಆದರೆ ಚೀನಾಕ್ಕೆ ಹೋಲಿಸಿದರೆ ನಮಗೆ ಯಾವ ಸೌಲಭ್ಯವೂ ಇಲ್ಲ. ಚೀನಾದಲ್ಲಿ 15 ದಿನಗಳಲ್ಲಿ ಎಲ್ಲವೂ ಸಿಗುತ್ತದೆ. ನಮ್ಮಲ್ಲಿ ಒಂದು ಅನುಮತಿ ಪಡೆಯಲು 2-3 ವರ್ಷ ಬೇಕಾಗುತ್ತಿದೆ. ಇಂತಹ ಅಸಹಕಾರ ಪರಿಸ್ಥಿತಿಯಲ್ಲಿ ನಾವು ಉದ್ಯಮ ಬೆಳೆಸುತ್ತಿದ್ದೇವೆ. ನಮ್ಮಲ್ಲಿ ಪ್ರತಿಭಾವಂತರಿದ್ದಾರೆ, ಅವಕಾಶಗಳಿವೆ. ಆದರೆ ಸರಕಾರಗಳ ಸ ಕಾರಾತ್ಮಕ ಸ್ಪಂದನೆ ಇಲ್ಲ ಎಂದು ಅವರು ಹೇಳಿದರು.
ಗೋವಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷೆ ಪ್ರತಿಮಾ ದೋಂಡ್, ಇದು ಕೇವಲ ಪ್ರದರ್ಶನವಲ್ಲ, ಬದಲಾಗಿ ಉದ್ಯಮಗಳ ಬೆಳವಣಿಗೆಗೆ ಶಕ್ತಿಯುತ ವೇದಿಕೆಯಾಗಿದೆ. ಇಂತಹ ಪ್ರದರ್ಶನದ ಮೂಲಕ ಉದ್ಯಮಗಳನ್ನು ಬಲಪಡಿಸಬೇಕು ಎಂದರು.
ಕಾರ್ಯಕ್ರಮದ ಪ್ರಾಯೋಜಕರಾದಅಶೋಕ್ ಐರನ್ ಗ್ರೂಪ್, ದತ್ತಾ -ಅನಿತಾ ಫೈನಾನ್ಶಿಯಲ್ ಸರ್ವೀಸಸ್, ಕ್ವಾಲಿಟಿ ಅನಿಮಲ್ ಫೀಡ್ಸ್ ನ ಸಂಜೀವ್ ದೇಶಪಾಂಡೆ, ಹೈಡ್ರೋಪ್ಯಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸ್ನೇಹಂ ಟೇಪಿಂಗ್ ಸೊಲ್ಯೂಷನ್, ಪೋಸಿಟ್ರಾನ್ ಎಂಜಿನಿಯರಿಂಗ್ ಕಾರ್ಪೊರೇಷನ್, ಶ್ರೀನಿವಾಸ್ ಇಂಡಕ್ಷನ್ ಸನ್ಮಾನಿಸಲಾಯಿತು.
ಸಂಜೀವಿನಿ ಕೊಟಬಾಗಿ ಪ್ರಾರ್ಥನೆ ಹಾಡಿದರು. ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಸ್ವಾಗತಿಸಿದರು. ಇವೆಂಟ್ ಚೇರಮನ್ ಉದಯ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಇವೆಂಟ್ ಕೋ ಚೇರಮನ್ ವಿಕ್ರಮ ಜೈನ್, ಬಿಸಿಸಿಐ ಆಡಳಿತ ಮಂಡಳಿ ಸದಸ್ಯರಾದ ರೋಹಿತ್ ಕಪಾಡಿಯಾ, ಸಂದೀಪ ಬಾಗೇವಾಡಿ, ಅನಿತಾ ಕಣಬರ್ಗಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸತೀಶ ಕುಲಕರ್ಣಿ ವಂದಿಸಿದರು.
ಸ್ಥಳೀಯ ಕೈಗಾರಿಕೆಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಉದ್ಯಮಿಗಳು, ಪಾಲುದಾರರು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮವು ಬೆಳಗಾವಿಯ ಕೈಗಾರಿಕಾ ವಲಯಕ್ಕೆ ಹೊಸ ಉತ್ತೇಜನ ನೀಡಿದ ಮಹತ್ವದ ಘಟ್ಟವಾಗಿ ಪರಿಣಮಿಸಿತು. 85ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿದೆ. ಬುಧವಾರ ಮತ್ತು ಗುರುವಾರವೂ ಪ್ರದರ್ಶನ ಮುಂದುವರಿಯಲಿದ್ದು, ಉಚಿತ ಪ್ರವೇಶವಿದೆ. ಜೊತೆಗೆ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ.
——————————————–
Industries and Entrepreneurs Must Grow Together in Belagavi; Strong Collective Voice Needed for Government Response: Eminent Speakers at BeLEX Inauguration
Belagavi, March 24:
Industries in Belagavi must grow, and entrepreneurs must be empowered. For this to happen, existing challenges need to be addressed, and industrialists must unite and raise a strong collective voice—this was the unanimous opinion expressed during the inauguration of the three-day industrial and trade exhibition BeLEX 2026, which began on Tuesday.
Organized by the Belagavi Chamber of Commerce and Industries (BCCI) at the Foundry Cluster premises in Udyambag, the exhibition brought attention to key issues hindering industrial growth in the region.
Speaking at the event, MLA Shri Abhay Patil said that while Belagavi is progressing, industries are not growing at the desired pace due to lack of government support. “The ‘Beyond Bengaluru’ initiative seems to be stopping at Hubballi. Unless industrialists unite and demonstrate their strength, no government will take notice,” he remarked.
He also outlined his vision for strengthening industrial infrastructure in Belagavi. He stressed the need for an ESI hospital in the southern part of the city, where a large number of workers are employed, noting that most facilities are currently concentrated in the northern region. “My dream is to bring large industries to Belagavi so that local youth can find employment here and stay close to their families,” he said.
Assuring his support to the industrial community, Patil added that Udyambag has been a key strength for Belagavi’s growth. He also revealed that efforts are underway to establish an international airport in the city. “With collective cooperation, both industries and entrepreneurs can grow,” he emphasized.
Renowned industrialist and Chairman of Ashok Iron Group, Shri Jayant Humbarwadi, noted that such exhibitions are being held after many years and must continue regularly. He pointed out that under the ‘Beyond Bengaluru’ initiative, the government envisions developing a Hubballi-Dharwad-Belagavi industrial cluster, but local industrialists are not raising their voices strongly enough.
He expressed concern over the preferential treatment given to multinational companies over Indian enterprises. “Due to lack of support from the government and officials, local industries are losing their voice. Issues like frequent server failures in government offices, lack of land availability, and inadequate infrastructure are major hurdles,” he said.
Humbarwadi stressed that unless industrialists speak boldly and collectively, their concerns will remain unheard. “We create jobs and pay taxes—there is no need to fear. We must unite and demand a conducive environment for industrial growth,” he asserted.
He further highlighted that BCCI has evolved from merely inspiring industries to actively showcasing them. He called for a shift from a city-centric approach to a cluster-based industrial vision focusing on sectors like EV, aerospace, glass, and FMCG.
Shri Lalit Gandhi, Chairman of the Maharashtra Jain Minority Finance Development Corporation, said such exhibitions inspire young entrepreneurs. “Industrialists generate employment and contribute taxes, yet they do not receive adequate support from politicians and officials. Only through unity can we secure government cooperation,” he said.
He noted that Maharashtra is developing 26 new industrial estates and has relatively better industrial policies. “Compared to China, we lack efficiency—where approvals take just 15 days, here it can take 2–3 years. Despite such challenges, our entrepreneurs continue to strive. We have talent and opportunities, but lack positive government response,” he observed.
President of the Goa Chamber of Commerce and Industry, Smt. Pratima Dhond, said the exhibition is not just a showcase but a powerful platform for industrial growth and collaboration. She emphasized the need to strengthen industries through such initiatives.
Sponsors including Ashok Iron Group, Datta-Anita Financial Services, Kwality Animal Feeds (Shri Sanjeev Deshpande), Hydropack India Pvt. Ltd., Sneham Taping Solution, Positron Engineering Corporation, and Shrinivas Induction were felicitated during the event.
The program began with an invocation by Sanjeevini Kotabagi. BCCI President Shri Prabhakar Nagarmunoli delivered the welcome address, while Event Chairman Shri Uday Joshi presented the overview. Event Co-Chairman Shri Vikram Jain, along with BCCI executive members Shri Rohit Kapadia, Shri Sandeep Bagewadi, and Smt. Anita Kanabargi, introduced the dignitaries. Secretary Shri Satish Kulkarni delivered the vote of thanks.
The exhibition, featuring over 85 stalls, aims to showcase the capabilities of local industries and has drawn enthusiastic participation from entrepreneurs and stakeholders across sectors. It will continue on Wednesday and Thursday with free entry and a series of panel discussions.
Overall, BeLEX 2026 has emerged as a significant platform providing fresh momentum to Belagavi’s industrial ecosystem.
———————
बेळगावमध्ये उद्योग आणि उद्योजक दोघेही मजबूत होणे आवश्यक; सरकारचे लक्ष वेधण्यासाठी एकत्रित आवाज गरजेचा : BeLEX उद्घाटनावेळी मान्यवरांचे मत
बेळगाव, 24 मार्च:
बेळगावमध्ये उद्योगांची वाढ होणे आणि उद्योजक सक्षम होणे अत्यावश्यक आहे. यासाठी सध्याच्या अडचणी दूर करणे गरजेचे असून, उद्योजकांनी एकत्र येऊन ठोस आवाज उठवला पाहिजे, असा एकमताने मतप्रवाह मंगळवारी सुरू झालेल्या तीन दिवसीय औद्योगिक आणि वाणिज्य प्रदर्शन BeLEX 2026 च्या उद्घाटन सोहळ्यात व्यक्त झाला.
बेळगाव चेंबर ऑफ कॉमर्स अँड इंडस्ट्रीज (BCCI) तर्फे उद्योगबाग येथील फाउंड्री क्लस्टर परिसरात या प्रदर्शनाचे आयोजन करण्यात आले असून, या निमित्ताने स्थानिक उद्योगांच्या वाढीस अडथळा ठरणाऱ्या विविध मुद्द्यांवर लक्ष वेधण्यात आले.
यावेळी आमदार श्री अभय पाटील म्हणाले की, बेळगाव प्रगती करत असले तरी सरकारच्या अपेक्षित सहकार्याअभावी उद्योगांची वाढ होत नाही. “Beyond Bengaluru” योजना हुबळीपर्यंतच थांबत आहे. “जोपर्यंत उद्योजक एकत्र येऊन आपली ताकद दाखवत नाहीत, तोपर्यंत कोणतेही सरकार त्यांच्याकडे लक्ष देणार नाही,” असे ते म्हणाले.
ते पुढे म्हणाले की, बेळगावमध्ये उद्योगवाढीसाठी आवश्यक पायाभूत सुविधा उभारण्याचे त्यांचे स्वप्न आहे. कामगारांची संख्या जास्त असलेल्या दक्षिण भागात ईएसआय रुग्णालयाची गरज असल्याचे त्यांनी नमूद केले. “मोठे उद्योग येथे यावेत, स्थानिक तरुणांना येथेच रोजगार मिळावा आणि ते आपल्या कुटुंबासोबत राहावेत, हा माझा प्रयत्न आहे,” असे त्यांनी सांगितले.
प्रसिद्ध उद्योजक आणि अशोक आयर्न समूहाचे अध्यक्ष श्री जयंत हुंबरवाडी म्हणाले की, अशा प्रकारचे प्रदर्शन अनेक वर्षांनंतर होत असून ते सातत्याने व्हायला हवे. “Beyond Bengaluru” अंतर्गत हुबळी-धारवाड- बेळगाव क्लस्टर विकसित करण्याची योजना असली तरी स्थानिक उद्योजक ठोस आवाज उठवत नाहीत, असे त्यांनी नमूद केले.
त्यांनी बहुराष्ट्रीय कंपन्यांना अधिक प्राधान्य दिले जात असून भारतीय उद्योगांना अपेक्षित सन्मान मिळत नसल्याची खंत व्यक्त केली. “सरकारी यंत्रणा आणि अधिकाऱ्यांच्या असहकारामुळे स्थानिक उद्योग अडचणीत आहेत. सर्व्हर डाऊन, जागेची कमतरता, सुविधा अभाव अशा समस्यांमुळे उद्योगवाढ कठीण झाली आहे,” असे त्यांनी सांगितले.
“आपण रोजगार निर्माण करतो, कर भरतो, त्यामुळे घाबरण्याचे कारण नाही. सर्वांनी एकत्र येऊन आवाज उठवणे आवश्यक आहे,” असेही त्यांनी स्पष्ट केले.
महाराष्ट्र जैन अल्पसंख्याक वित्त विकास महामंडळाचे अध्यक्ष श्री ललित गांधी यांनी सांगितले की, अशा प्रदर्शनामुळे तरुण उद्योजकांना प्रेरणा मिळते. “उद्योग रोजगार निर्माण करतात आणि कर भरतात, तरीही त्यांना अपेक्षित सहकार्य मिळत नाही. संघटितपणे प्रयत्न केल्यासच सरकारचे सहकार्य मिळेल,” असे ते म्हणाले.
ते पुढे म्हणाले की, महाराष्ट्रात 26 नवीन औद्योगिक वसाहती उभारल्या जात आहेत आणि तेथील औद्योगिक धोरण तुलनेने चांगले आहे. “चीनमध्ये 15 दिवसांत मंजुरी मिळते, तर भारतात 2-3 वर्षे लागतात. अशा परिस्थितीतही आपल्या उद्योजकांनी जिद्दीने उद्योग वाढवले आहेत,” असे त्यांनी नमूद केले.
गोवा चेंबर ऑफ कॉमर्स अँड इंडस्ट्रीच्या अध्यक्षा सौ. प्रतिमा धोंड यांनी सांगितले की, हे प्रदर्शन केवळ प्रदर्शन नसून उद्योगवाढीसाठी एक प्रभावी व्यासपीठ आहे.
या कार्यक्रमात अशोक आयर्न ग्रुप, दत्ता-अनिता फायनान्शियल सर्व्हिसेस, क्वालिटी अॅनिमल फीड्स (श्री संजीव देशपांडे), हायड्रोपॅक इंडिया प्रा. लि., स्नेहम टेपिंग सोल्यूशन, पोझिट्रॉन इंजिनिअरिंग कॉर्पोरेशन आणि श्रीनिवास इंडक्शन या प्रायोजकांचा सत्कार करण्यात आला.
कार्यक्रमाची सुरुवात संजीविनी कोटबागी यांच्या प्रार्थनेने झाली. BCCI अध्यक्ष श्री प्रभाकर नागरमुनोळी यांनी स्वागत केले, तर इव्हेंट चेअरमन श्री उदय जोशी यांनी प्रास्ताविक केले. इव्हेंट को-चेअरमन श्री विक्रम जैन तसेच रोहित कपाडिया, संदीप बागेवाडी आणि सौ. अनिता कणबर्गी यांनी पाहुण्यांची ओळख करून दिली. सचिव श्री सतीश कुलकर्णी यांनी आभार मानले.
85 हून अधिक स्टॉल्स असलेल्या या प्रदर्शनात विविध क्षेत्रांतील उद्योजक आणि घटकांनी उत्साहाने सहभाग घेतला. बुधवार आणि गुरुवारीही हे प्रदर्शन सुरू राहणार असून प्रवेश विनामूल्य आहे.
एकूणच, BeLEX 2026 हे बेळगावच्या औद्योगिक क्षेत्राला नवे बळ देणारे महत्त्वाचे व्यासपीठ ठरले आहे.




