Belagavi NewsBelgaum NewsCrimeKannada NewsKarnataka News

*ಜಾತ್ರೆಯಲ್ಲಿ ವ್ಯಕ್ತಿಯ ಕೊಲೆ: ಬೆಳಗಾವಿ ಪೊಲೀಸರಿಂದ 8 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾರ್ಚ್ 31 ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ಹಳೆಯ ವೈಷ್ಯಮಕ್ಕೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ನೇಸರಗಿ ಪೊಲೀಸ ಠಾಣೆಯ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ.  

ಸಂಗನಗೌಡ ಬಸನಗೌಡ ಪಾಟೀಲ್ (50) ಎಂಬುವರ ಕೊಲೆ ಆಗಿತ್ತು.‌ ಕೊಲೆಯಾದ ವ್ಯಕ್ತಿ ಹಾಗೂ ಕೊಲೆ ಮಾಡಿದ ಆರೋಪಿಗಳ ನಡುವೆ ಕಳೆದ ಕೆಲ ವರ್ಷಗಳಿಂದ ಕಲಹ ನಡೆಯುತಿತ್ತು. ಹಾಗಾಗಿ ಮಾರ್ಚ್ 31 ರಂದು ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಕೊಲೆಯಾದ ವ್ಯಕ್ತಿ ಮದ್ಯಪಾನ ಮಾಡಿ ಡ್ಯಾನ್ಸ್ ಮಾಡುವ ವೇಳೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಇಸದ ನೇಸರಿಗಿ ಪೊಲೀಸ್ ಠಾಣೆಯ ಪೊಲೀಸರು, ದೇಮಪ್ಪ @ ಮುದಕಪ್ಪ ಬಸಲಿಂಗಪ್ಪ ಬಳಗನ್ನವರ (49), ಮಂಜುನಾಥ ಮಾರುತಿ ಬಳಗನ್ನವರ (27), ರುದ್ರಪ್ಪ ಚೂನಪ್ಪ @ ಶಿವನಪ್ಪ ಬಳಗನ್ನವರ  (36), ವಿಜಯ ಸುರೇಶ ಬಳಗನ್ನವರ (26), ಸೂರಪ್ಪ ಬಸಲಿಂಗಪ್ಪ ಬಳಗನ್ನವರ (56), ಸಿದ್ದಪ್ಪ ಬಸಪ್ಪ ಸಿಂಗಾಡಿ ವಯಸ್ಸು (21), ನಾಗರಾಜ ರಾಮಪ್ಪ ಬಳಗನ್ನವರ (26) ಹಾಗೂ ಬಸವಂತಪ್ಪ ಲಕ್ಷ್ಮಣ ಬಳಗನ್ನವರ  (45) ಎಂಬ 8 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Home add -Advt

Related Articles

Back to top button