Belagavi NewsBelgaum NewsCrimeKannada NewsKarnataka NewsNational

*ಬಾಲ್ಯ ವಿವಾಹ ಮಾಡುತ್ತಿದ್ದ ಪೋಷಕರಿಗೆ ಶಾಕ್ ನೀಡಿದ ಬೆಳಗಾವಿಯ ಅಕ್ಕಾ ಪಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾತ್ರೋರಾತ್ರಿ ಸದ್ದಿಲ್ಲದಂತೆ ಮನೆಯಲ್ಲಿ ಬಾಲ್ಯ ವಿವಾಹ ನಡೆಸಲು ಮುಂದಾಗಿದ್ದ ಪೋಷಕರಗೆ ಬೆಳಗಾವಿ ಅಕ್ಕಾ ಪಡೆ ಶಾಕ್ ನೀಡಿದೆ.

ಬೆಳಗಾವಿ ನಗರದ ವಂಟಮೂರಿ ಕಾಲನಿಯಲ್ಲಿ ಏ.20 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರು ರಾತ್ರಿ ಪೆಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಅಕ್ಕಪಡೆ ಸಿಬ್ಬಂದಿಗೆ ಒಂದು ಮನೆಯ ಮುಂದೆ ಮಂಟಪ ಹಾಕಿರುವುದು ಅನುಮಾನಾಸ್ಪದವಾಗಿ ಕಾಣಿಸಿಕೊಂಡಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದರು. ಈ ವೇಳೆ ಏ.21ರಂದು ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪುಣಾ ನಿವಾಸಿಯೊಂದಿಗೆ ನೆರವೇರಿಸಲು ಸಿದ್ಧತೆ ಮಾಡಿರುವುದು ತಿಳಿದುಬಂದಿತು.

ಬಾಲಕಿಯ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ ಪರಿಶೀಲಿಸಿದಾಗ, ಆಕೆಗೆ ಕೇವಲ 17 ವರ್ಷ 4 ತಿಂಗಳು ವಯಸ್ಸು ಇರುವುದಾಗಿ ದೃಢಪಟ್ಟಿತು. ತಕ್ಷಣ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದಿಲೀಪ ನಿಂಬಾಳಕರ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರ ಮಾರ್ಗದರ್ಶನದಲ್ಲಿ ಮಕ್ಕಳ ಸಹಾಯವಾಣಿ ತಂಡ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಯ 112 ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಕಾರ್ಯಾಚರಣೆ ನಡೆಸಲಾಯಿತು. 

Home add -Advt

ಸಮಯಕ್ಕೆ ತಕ್ಕಂತೆ ಬಾಲ್ಯ ವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಈ ಸಂಬಂಧ ಬಾಲಕಿಯ ತಂದೆಯ ವಿರುದ್ಧ ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button