Belagavi NewsBelgaum NewsCrimeKannada NewsKarnataka News
*ವಾರಸುದಾರರಿಗೆ ಮೋಬೈಲ್ ಹಸ್ತಾಂತರಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದು ಹೋಗಿದ್ದ 22 ಮೋಬೈಲ್‌ಗಳನ್ನು ಪತ್ತೆ ಹಚ್ಚಿ ಮರಳಿ ವಾರಸುದಾರರಿಗೆ ನೀಡುವಲ್ಲಿ ಬೆಳಗಾವಿ ಜಿಲ್ಲೆಯ ಕಟಕೋಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡ ಮೋಬೈಲ್‌ಗಳನ್ನು ಸಿ.ಇ.ಐ.ಆರ್ ಪೋರಲ್‌ನಲ್ಲಿ ಒಟ್ಟು 22 ಮೋಬೈಲ್ ಪೋನಗಳನ್ನು ಕಟಕೋಳ ಪೊಲೀಸ ಠಾಣೆಯ ಸಿಬ್ಬಂದಿ ಈರಣ್ಣ ವೈ.ಕಡಕೋಳ ಅನ್‌ಬ್ಲಾಕ್ ಮಾಡಿ ಪತ್ತೆ ಹಚ್ಚಿದ್ದಾರೆ.
ಮತ್ತೆ ಹಚ್ಚಿದ ಮೋಬೈಲ್‌ಗಳನ್ನು ರಾಮದುರ್ಗ ಸಿ.ಪಿ.ಐ ಮುಖಾಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.


