EducationKannada NewsKarnataka NewsNational

*ಎಸ್‌ಎಸ್ಎಲ್‌ಸಿ ಪರೀಕ್ಷೆ-2: ನೋಂದಣಿಗೆ ನಾಳೆ ಕೊನೆಯ ದಿನ*

ಪ್ರಗತಿವಾಹಿನಿ ಸುದ್ದಿ : 2026 ನೇ ಸಾಲಿನ SSLC ಪರೀಕ್ಷೆ-2 ನೋಂದಣಿಗೆ ಏಪ್ರಿಲ್ 30 ಕೊನೆ ದಿನವಾಗಿದ್ದು, ಕೂಡಲೆ ಎಲ್ಲಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.

ಪರೀಕ್ಷೆ-1ರಲ್ಲಿ ಅನುತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ನೋಂದಣಿಯಾಗಿ ಪರೀಕ್ಷೆ ಬರೆಯುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸುವುದು ಸರಕಾರ ಹಾಗೂ ಶಿಕ್ಷಣ ಇಲಾಖೆಯ ಹೊಣೆ. ಪರೀಕ್ಷೆ ಫಲಿತಾಂಶದಿಂದ ಯಾವುದೇ ವಿದ್ಯಾರ್ಥಿ ನಿರಾಸೆಗೊಂಡು ಶಿಕ್ಷಣವನ್ನು ಮೊಟಕುಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button