Belagavi NewsBelgaum NewsKannada NewsKarnataka NewsLatest

*ನ್ಯಾಟ್ ಗ್ರೀಡ್ ತಂತ್ರಾಂಶದಿಂದ ತಾಯಿಂದ ದೂರವಿದ್ದ ಮಗನನ್ನು ಪತ್ತೆ ಮಾಡಿದ ಬೆಳಗಾವಿ ಪೊಲೀಸರು* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನನಗೆ ಸಾಲ ಬಹಳ ಆಗಿದೆ ಎಂದು ಮೂರು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದೆ ಯುವಕನ್ನು ಬೆಳಗಾವಿ ಪೊಲೀಸರು ನ್ಯಾಟ್ ಗ್ರೀಡ್ (NAT GRID) ತಂತ್ರಾಂಶದ ಮೂಲಕ ಪತ್ತೆ ಹಚ್ಚಿದ್ದಾರೆ. 

ಮುಸ್ತಫಾ ಅಪ್ಪಾಸಾಹೇಬ @ ಅಪ್ಪಾಸಾಬ ಜಮಾದಾರ (22)  ಕಾಣೆಯಾಗಿದ್ದ ಯುವಕ, ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಶಿಂದೆ ಚಾಳ ಹಲಿಮಾ ಅಪ್ಪಾಸಾಬ ಜಮಾದಾರ ಅವರು ಮಗ ಕಾಣೆ ಆಗಿದ್ದಾನೆ ಎಂದು ದೂರು ನೀಡಿದರು.‌ 

ನನಗೆ ಸಾಲ ಬಹಳ ಆಗಿದ್ದರಿಂದ ನಾನು ಮನೆ ಬಿಟ್ಟು ಬೇರೆ ಕಡೆಗೆ ದುಡಿಯಲು ಹೋಗುತ್ತಿದ್ದೆನೆ. 2 ವರ್ಷ ಬಿಟ್ಟು ಬರುತ್ತೆನೆ ನನಗೆ ಹುಡುಕಾಡಬೇಡಿ ಎಂದು ಲೇಟರ್ ಬರೆದು ಮುಸ್ತಫಾ ಅಪ್ಪಾಸಾಹೇಬ ಹೋಗಿದ್ದ. 

ಈ ಕುರಿತು ಸಂಕೇಶ್ವರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 109/2023 ಕಲಂ: ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.‌ ಕಾಣೆಯಾದ ಮುಸ್ತಫಾ ಅಪ್ಪಾಸಾಹೇಬ @ ಅಪ್ಪಾಸಾಬ ಜಮಾದಾರ ಪತ್ತೆ ಮಾಡಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದಾಗ ಕೊನೆಗೆ ಕಾಣೆಯಾದ ವ್ಯಕ್ತಿಯ ಭಾವಚಿತ್ರವನ್ನು ನ್ಯಾಟ್ ಗ್ರೀಡ್ (NAT GRID) ತಂತ್ರಾಂಶದಲ್ಲಿ ಅಪ್ಲೋಡ ಮಾಡಿ ಕಾಣೆಯಾದ ವ್ಯಕ್ತಿಯ ಮೊಬೈಲ ನಂಬರ ಪತ್ತೆ ಮಾಡಿ ಟಾವರ್ ಲೊಕೇಶನ ಸಹಾಯದಿಂದ ವ್ಯಕ್ತಿಯು ಗೋವಾದ ಮಾಂದ್ರಮನಲ್ಲಿ ಪತ್ತೆಯಾಗಿದ್ದಾನೆ.ಸದ್ಯ ವ್ಯಕ್ತಿಯ ಹೇಳಿಕೆ ಪಡೆದುಕೊಂಡು ಅವನ ತಾಯಿಯ ಜೊತೆ ಕಳುಹಿಸಲಾಗಿದೆ. 

Home add -Advt

Related Articles

Back to top button