Belagavi NewsBelgaum NewsKannada NewsKarnataka NewsLatest

*7 ಗಂಭೀರ ವಿಷಯ:  ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ನೇರ ಚರ್ಚೆಗೆ ಎಫ್ಒಎಬಿ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  :  ಬೆಳಗಾವಿ ಅಭಿವೃದ್ಧಿ ದೃಷ್ಟಿಯಿಂದ ತುರ್ತಾಗಿ ಆಗಬೇಕಿರುವ 7 ಗಂಭೀರ ವಿಷಯಗಳನ್ನು ಗುರುತಿಸಿರುವ  ಎಫ್ಒಎಬಿ (ಫೆಡರೇಶನ್ ಆಫ್ ಅಸೋಸಿಯೇಶನ್ಸ್ ಆಫ್ ಬೆಳಗಾವಿ), ಈ  ಕುರಿತು ಜಿಲ್ಲೆಯ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ನೇರ ಚರ್ಚೆಗೆ ನಿರ್ಧರಿಸಿದೆ.

ಗುರುವಾರ ಸಂಜೆ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಸಭೆ ಸೇರಿದ್ದ ಎಫ್ಒಎಬಿಯ ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ನಗರದ ಅಭಿವೃದ್ಧಿಗೆ ಪೂರಕವಾಗಿ ರೂಪಿಸಬೇಕಿರುವ ರೈಲ್ವೆ ಮೇಲ್ಸೆತುವೆ ಯೋಜನೆ, ಸಂಚಾರ ದಟ್ಟಣೆ ನಿವಾರಿಸಬೇಕಿರುವ ರಿಂಗ್ ರಸ್ತೆ, ಕೈತಪ್ಪಿ ಹೋಗುವ ಹಂತದಲ್ಲಿರುವ ಸಿಟೀಸ್ 2, ನಿರ್ಲಕ್ಷ್ಯಕ್ಕೊಳಗಾಗಿರುವ ಸಿಡಿಪಿ ಹಾಗೂ ಎಸ್ ಟಿಪಿ ಯೋಜನೆ, ತುರ್ತಾಗಿ ಮೇಲ್ದರ್ಜೆಗೇರಿಸಬೇಕಾಗಿರುವ ಹೆಸ್ಕಾಂ ಪವರ್ ಸ್ಟೇಶನ್ಸ್, ಗೇಲ್ ಗ್ಯಾಸ್ ಪೈಪ್ ಲೈನ್, ಬಯೋಗ್ಯಾಸ್, ಗೋಬರ್ ಧನ್ ಯೋಜನೆಗಳನ್ನು ಮೊದಲ ಹಂತದಲ್ಲಿ ಗುರುತಿಸಲಾಗಿದೆ.

ಈಗಾಗಲೆ ನಿರ್ಮಾಣವಾಗಿರುವ ಅವೈಜ್ಞಾನಿಕ ರೈಲ್ವೆ ಮೇಲ್ಸೆತುವೆಗಳಿಂದಾಗಿ ನಗರದಲ್ಲಿ ಉಂಟಾಗಿರುವ ಸಮಸ್ಯೆ ಹಾಗೂ ಆಗಬೇಕಿರುವ ಇನ್ನಷ್ಟು ಮೇಲ್ಸೆತುವೆಗಳಿಂದ ನಗರ ಅಭಿವೃದ್ಧಿಗೆ ಮಾರಕವಾಗುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ರಸ್ತೆಗೆ ಮೇಲ್ಸೆತುವೆ ಬದಲು ರೈಲ್ವೆ ಟ್ರ್ಯಾಕ್ ಗೆ ಮೇಲ್ಸೆತುವೆ ಮಾಡಿ, ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಾಣದಿಂದ ನಗರದ ಅಭಿವೃದ್ಧಿಗೆ ವೇಗ ನೀಡಬಹುದು, ನಗರ ಸೌಂದರ್ಯ, ಪಾರಂಪರಿಕ ತಾಣಗಳ ಸಂರಕ್ಷಣೆ ಜೊತೆಗೆ ಹಲವಾರು ಸಕಾರಾತ್ಮಕ ಅಂಶಗಳನ್ನು ಇದು ಒಳಗೊಂಡಿದೆ ಎನ್ನುವುದನ್ನು, ದೇಶದ ಅನೇಕ ನಗರಗಳ ಸಕ್ಸಸ್ ಸ್ಟೋರಿಗಳೊಂದಿಗೆ ತಜ್ಞರು ಸಭೆಯಲ್ಲಿ ವಿವರಿಸಿದರು. 

Home add -Advt

ಕೇಂದ್ರ ಸರಕಾರದ ಸಿಟೀಸ್ 2 ಯೋಜನೆಗೆ ಬೆಳಗಾವಿ ಆಯ್ಕೆಯಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೈತಪ್ಪುವ ಹಂತದಲ್ಲಿದೆ. ಇದು ಬೆಳಗಾವಿ ಅಭಿವೃದ್ಧಿಗೆ ದೊಡ್ಡಮಟ್ಟದ ಹಿನ್ನಡೆಯಾಗಲಿದೆ ಎನ್ನುವುದನ್ನೂ ಸ್ಪಷ್ಟ ಮಾಹಿತಿಗಳೊಂದಿಗೆ ವಿವರಿಸಲಾಯಿತು. ಕೇವಲ 2 ಹಳ್ಳಿಗಳ ಭೂ ಸ್ವಾಧೀನ ಪ್ರಕ್ರಿಯೆ ಆಗದಿರುವುದರಿಂದ ಸುದೀರ್ಘ ಅವಧಿಯಿಂದ ರಿಂಗ್ ರಸ್ತೆ ಯೋಜನೆಗೆ ಹಿನ್ನಡೆಯುಂಟಾಗಿದ್ದು, ಇದರಿಂದ ನಗರದ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆ ಎನ್ನುವ ವಿಷಯವನ್ನು ಚರ್ಚಿಸಲಾಯಿತು.

ನಗರ ಬೆಳೆದಂತೆ ಬದಲಾಗಬೇಕಿದ್ದ ಸಿಡಿಪಿ ಯೋಜನೆ ಸುದೀರ್ಘ ಅವಧಿಯಿಂದ  ನನೆಗುದಿಗೆ ಬಿದ್ದಿರುವುದರಿಂದ ಸಕಾರಾತ್ಮಕವಾಗಿ ನಗರದ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ವಾರ್ಡಿಗೊಂದು ಇರಬೇಕಿದ್ದ ಎಸ್ ಟಿಪಿ ಯೋಜನೆ ನಗರಕ್ಕೊಂದೂ ಇಲ್ಲದಿರುವುದು ಬೆಳೆಯುತ್ತಿರುವ ನಗರಕ್ಕೆ ಮಾರಕವಾಗಿದೆ. ಕೂಡಲೇ ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನಹರಿಸಬೇಕಿದೆ ಎನ್ನುವ ಅಂಶಗಳನ್ನು ಗಮನಕ್ಕೆ ತರಲಾಯಿತು.

ನಗರದ ಎಲ್ಲ ವಿದ್ಯುತ್ ಸ್ಟೇಶನ್ ಗಳು ಮಿತಿಮೀರಿದ ಹೊರೆಯಿಂದ ಕೂಡಿವೆ. ತುರ್ತಾಗಿ 400 ಕೆವಿ ಸ್ಟೇಶನ್ ಮತ್ತು ಹಲವು ಸಬ್ ಸ್ಟೇಶನ್ ಗಳು ಆಗದಿದ್ದರೆ ಇನ್ನೊಂದ ವರ್ಷದಲ್ಲಿ ನಗರ ದೊಡ್ಡ ಸಮಸ್ಯೆಗೆ ಒಳಗಾಗಲಿದೆ ಎನ್ನುವ ಕುರಿತು ಗಮನ ಸೆಳೆಯಲಾಯಿತು. ಇದರ ಜೊತೆಗೆ ಇನ್ನೂ ಕೆಲವು ವಿಷಯಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಹಲಗಾ – ಮಚ್ಛೆ ಬೈ ಪಾಸ್ ಮತ್ತು ಯಡಿಯೂರಪ್ಪ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮಹಾತ್ಮಾ ಫುಲೆ ರಸ್ತೆಗಳನ್ನು ಸಂಚಾರಕ್ಕೆ ಮುಕ್ತ ಮಾಡದೆ ನರದಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯ ಆರಂಭಿಸುವುದರಿಂದ ಆಗಬಹುದಾದ ಸಂಚಾರ ದಟ್ಟಣೆ ಕುರಿತು ಸಭೆ ಕಳವಳ ವ್ಯಕ್ತಪಡಿಸಿತು. 

ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಜೊತೆ ಮೊದಲ ಸುತ್ತಿನ ಚರ್ಚೆ ನಡೆಸಿ, ನಂತರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಸಚಿವರು ಹಾಗೂ ಬೆಳಗಾವಿ ನಗರದ ಶಾಸಕರೊಂದಿಗೆ ಸಭೆ ನಡೆಸಿ ಗಮನ ಸೆಳೆಯಬೇಕು ಎನ್ನುವ ನಿರ್ಧಾರವನ್ನು ಸಭೆ ಕೈಗೊಂಡಿತು. 

ಅಧ್ಯಕ್ಷತೆ ವಹಿಸಿದ್ದ ಹಿರಿಯ ಉದ್ಯಮಿ, ಫೌಂಡ್ರಿ ಕ್ಲಸ್ಟರ್ ಚೇರಮನ್ ರಾಮ್ ಭಂಡಾರೆ ಮಾತನಾಡಿ, ಬೆಳಗಾವಿ ಅಭಿವೃದ್ಧಿ ದೃಷ್ಟಿಯಿಂದ ಎಫ್ಒಎಬಿ ಸಂಘಟನೆಯ ಹೆಜ್ಜೆ ಅತ್ಯಂತ ಪ್ರಶಂಸನೀಯವಾಗಿದೆ, ಇದು ಅಗತ್ಯವಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳನ್ನು, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಕೆಲಸ ಮಾಡಬೇಕು ಎಂದರು. ಎಫ್ಒಎಬಿ ಸಂಚಾಲಕ ಚೈತನ್ಯ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಇನ್ನೋರ್ವ ಸಂಚಾಲಕ ಎಂ.ಕೆ.ಹೆಗಡೆ, ಮುಂದಿನ ಯೋಜನೆಗಳ ಕುರಿತು ವಿವರಿಸಿ, ವಂದಿಸಿದರು.

ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಪ್ರೊಪೇಶನಲ್ ಫೋರಮ್ ನ ಡಾ.ಎಚ್.ಬಿ.ರಾಜಶೇಖರ ಮತ್ತು ಬಿ.ಜಿ.ಧರೆಣ್ಣಿ, ಲಘು ಉದ್ಯೋಗ ಭಾರತಿಯ ಸಚಿನ್ ಸಬ್ನಿಸ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ನ ಸಿ.ಬಿ.ಹಿರೇಮಠ, ಕ್ರೆಡೈ ಅಧ್ಯಕ್ಷ ಯುವರಾಜ ಹುಲಜಿ ಮತ್ತು ಸದಸ್ಯ ಆನಂದ ಕುಲಕರ್ಣಿ, ಫೌಂಡ್ರಿ ಕ್ಲಸ್ಟರ್ ಕಾರ್ಯದರ್ಶಿ ಸದಾನಂದ ಹುಂಬರವಾಡಿ ಮತ್ತು ಸದಸ್ಯ ವಿಜಯ ಮುಚ್ಚಂಡಿಕರ್, ಎಫ್ಒಎಬಿ ಸಂಯೋಜಕ ರಾಜೇಂದ್ರ ಮುಂದಡ, ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಅಸೋಸಿಯೇಶನ್ ನ ಎಸ್.ಎಸ್.ಗಡಿಯಣ್ಣವರ್,  ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಪ್ರಸನ್ನ ಕೋಚರಿ, ಎಸ್.ಬಿ.ದಂಡಗಿ, ಅಮಿತ್ ಕಾಲಕುಂದ್ರಿ, ಅನಿಲ ರಾಮದುರ್ಗ ಮೊದಲಾದವರು ಭಾಗವಹಿಸಿದ್ದರು. 

——————-

FOAB Decides to Hold Direct Discussions With Ministers, MLAs and Deputy Commissioner on 7 Critical Issues

Pragativahini News, Belagavi: The Federation of Associations of Belagavi (FOAB), which has identified seven critical issues requiring urgent attention for the development of Belagavi, has decided to hold direct discussions with district ministers, MLAs and the Deputy Commissioner regarding these matters.

Representatives from more than 20 organizations under FOAB gathered on Thursday evening at the Foundry Cluster auditorium and held detailed discussions for nearly two hours. In the first phase, the organization identified several priority issues including the railway overbridge project planned for the city’s development, the ring road project aimed at easing traffic congestion, the Smart Cities 2 project which is on the verge of slipping away, the neglected CDP and STP projects, the urgent upgradation of HESCOM power stations, and the implementation of GAIL gas pipeline, biogas and Gobar-Dhan projects.

The meeting also held extensive discussions regarding the problems created by the unscientifically planned railway overbridges already constructed in the city, and how additional overbridges of a similar nature could adversely affect Belagavi’s future development. Experts explained, citing successful examples from several cities across the country, that instead of constructing more road overbridges, developing elevated railway tracks by building overbridges for railway lines could significantly accelerate the city’s growth. They noted that such a model would also help improve urban aesthetics, preserve heritage sites and offer several other long-term benefits.

Participants further pointed out that although Belagavi had been selected for the Central Government’s Smart Cities 2 project, official negligence has pushed the project to the verge of being lost, which would become a major setback for the city’s development. The meeting also discussed how the delay in land acquisition in just two villages has stalled the ring road project for several years, resulting in severe traffic congestion across the city.

It was observed that the City Development Plan (CDP), which should have evolved along with the city’s growth, has remained pending for a long period, preventing planned and positive urban development. Members also expressed concern that despite the need for ward-wise Sewage Treatment Plant (STP) projects, the city does not have even a single such facility, which could become dangerous for a rapidly growing urban centre. The administration was urged to immediately focus on these concerns.

The meeting also highlighted that all power stations in the city are functioning under excessive load conditions. Participants warned that unless a 400 KV station and several substations are established urgently, Belagavi could face a major power crisis within the next year.

Along with these issues, the meeting expressed concern over the possibility of severe traffic congestion if the proposed flyover construction work at Nar proceeds before opening the Mahatma Phule Road connecting the Halaga–Machhe bypass and Yediyurappa Marg for public traffic movement.

The meeting resolved to first hold discussions with the Deputy Commissioner at the earliest and subsequently meet the district in-charge minister, other district ministers and MLAs of Belagavi city to draw their attention to these urgent development issues.

Presiding over the meeting, senior industrialist and Foundry Cluster Chairman Ram Bhandare said that FOAB’s initiative for the development of Belagavi is highly commendable and much needed. He emphasized that in the coming days the organization should work by taking all associations, public representatives and government officials into confidence.

FOAB Convener Chaitanya Kulkarni welcomed the gathering and delivered the introductory remarks. Another convener, M.K. Hegde explained the future plans and delivered the vote of thanks.

Among those present were Chamber of Commerce President Prabhakar Nagaramunoli, Professional Forum members Dr. H.B. Rajashekhar and B.G. Dharenni, Laghu Udyog Bharati representative Sachin Sabnis, Indian Institute of Engineers representative C.B. Hiremath, CREDAI President Yuvaraj Hulji and member Anand Kulkarni, Foundry Cluster Secretary Sadanand Humbarwadi and member Vijay Muchandikar, FOAB Coordinator Rajendra Mundad, Chemists and Druggists Association representative S.S. Gadiyannavar, and representatives of various organizations including Prasanna Kochari, S.B. Dandagi, Amit Kalakundri and Anil Ramdurg, among others.

_—-++

७ गंभीर विषयांवर मंत्री, आमदार आणि जिल्हाधिकाऱ्यांसोबत थेट चर्चेचा एफओएबीचा निर्णय

बेळगाव :

बेळगावच्या विकासासाठी तातडीने मार्गी लावण्याची गरज असलेल्या ७ गंभीर विषयांची ओळख करून घेतलेल्या एफओएबीने (फेडरेशन ऑफ असोसिएशन्स ऑफ बेळगाव) या विषयांवर जिल्ह्याचे मंत्री, आमदार आणि जिल्हाधिकाऱ्यांसोबत थेट चर्चा करण्याचा निर्णय घेतला आहे.

गुरुवारी सायंकाळी फाउंड्री क्लस्टर सभागृहात झालेल्या बैठकीत एफओएबी अंतर्गत असलेल्या २० हून अधिक संघटनांच्या प्रतिनिधींनी सुमारे दोन तास सविस्तर चर्चा केली. शहराच्या विकासासाठी महत्त्वपूर्ण असलेल्या रेल्वे उड्डाणपूल प्रकल्प, वाहतूक कोंडी कमी करण्यासाठीची रिंग रोड योजना, हातातून निसटण्याच्या स्थितीत असलेली स्मार्ट सिटीज २ योजना, दुर्लक्षित सीडीपी आणि एसटीपी योजना, तातडीने उन्नतीकरणाची गरज असलेली हेस्कॉम वीज केंद्रे, तसेच गेल गॅस पाइपलाइन, बायोगॅस आणि गोबरधन योजना या विषयांना पहिल्या टप्प्यात प्राधान्य देण्यात आले.

शहरात आधीच उभारण्यात आलेल्या अवैज्ञानिक रेल्वे उड्डाणपूलांमुळे निर्माण झालेल्या समस्यांवर तसेच भविष्यात उभारण्यात येणाऱ्या आणखी उड्डाणपूलांमुळे शहराच्या विकासावर होणाऱ्या विपरीत परिणामांवर बैठकीत सखोल चर्चा झाली. रस्त्यांवर उड्डाणपूल उभारण्याऐवजी रेल्वे ट्रॅकसाठी उंच मार्ग (एलिव्हेटेड रेल्वे ट्रॅक) विकसित केल्यास शहराच्या विकासाला मोठी गती मिळू शकते, असे तज्ज्ञांनी देशातील अनेक यशस्वी शहरांची उदाहरणे देत स्पष्ट केले. यामुळे शहराचे सौंदर्य वाढेल, वारसा स्थळांचे संरक्षण होईल आणि अनेक सकारात्मक परिणाम दिसून येतील, असेही त्यांनी सांगितले.

केंद्र सरकारच्या स्मार्ट सिटीज २ योजनेसाठी बेळगावची निवड झाली असतानाही अधिकाऱ्यांच्या दुर्लक्षामुळे ही योजना हातातून जाण्याच्या स्थितीत असल्याचे स्पष्ट माहितींसह मांडण्यात आले. ही बाब शहराच्या विकासासाठी मोठा धक्का ठरू शकते, असे मत व्यक्त करण्यात आले.

फक्त दोन गावांतील जमीन संपादन प्रक्रिया पूर्ण न झाल्यामुळे रिंग रोड प्रकल्प अनेक वर्षांपासून रखडला असून त्यामुळे शहरातील वाहतूक कोंडी गंभीर बनली असल्याची चर्चा झाली.

शहराच्या वाढीसोबत बदल होणे अपेक्षित असलेली सिटी डेव्हलपमेंट प्लॅन (सीडीपी) योजना दीर्घकाळ प्रलंबित राहिल्यामुळे नियोजनबद्ध विकासाला अडथळा निर्माण होत असल्याचे बैठकीत नमूद करण्यात आले. तसेच प्रत्येक प्रभागासाठी आवश्यक असलेल्या एसटीपी प्रकल्पांपैकी शहरात एकही प्रकल्प अस्तित्वात नसल्याची बाबही चिंतेची असल्याचे सांगण्यात आले. वाढत्या शहरासाठी ही परिस्थिती धोकादायक ठरू शकते, त्यामुळे प्रशासनाने तातडीने लक्ष देण्याची गरज व्यक्त करण्यात आली.

शहरातील सर्व वीज केंद्रांवर क्षमतेपेक्षा अधिक ताण असल्याचे सांगण्यात आले. तातडीने ४०० केव्ही स्टेशन आणि अनेक नवीन सबस्टेशन्स उभारले नाहीत, तर पुढील एका वर्षात शहराला मोठ्या वीज समस्येला सामोरे जावे लागू शकते, असा इशारा देण्यात आला.

याशिवाय, हलगा–मच्छे बायपास आणि येडियुरप्पा मार्गाला जोडणारा महात्मा फुले रस्ता वाहतुकीसाठी खुला न करता नर येथे फ्लायओव्हरचे काम सुरू झाल्यास शहरात मोठ्या प्रमाणावर वाहतूक कोंडी निर्माण होऊ शकते, अशी चिंताही बैठकीत व्यक्त करण्यात आली.

लवकरच जिल्हाधिकाऱ्यांसोबत पहिल्या टप्प्यात चर्चा करून त्यानंतर जिल्ह्याचे पालकमंत्री, इतर मंत्री आणि बेळगाव शहरातील आमदारांसोबत बैठक घेऊन या विषयांकडे त्यांचे लक्ष वेधण्याचा निर्णय बैठकीत घेण्यात आला.

बैठकीच्या अध्यक्षस्थानी असलेले वरिष्ठ उद्योजक आणि फाउंड्री क्लस्टरचे अध्यक्ष राम भंडारे म्हणाले की, बेळगावच्या विकासासाठी एफओएबीचे हे पाऊल अत्यंत कौतुकास्पद आणि आवश्यक आहे. पुढील काळात सर्व संघटना, लोकप्रतिनिधी आणि अधिकाऱ्यांना विश्वासात घेऊन काम करण्याची गरज असल्याचे त्यांनी सांगितले.

एफओएबीचे संयोजक चैत्यन्य कुलकर्णी यांनी स्वागत करून प्रास्ताविक केले. दुसरे संयोजक एम. के. हेगडे यांनी पुढील योजनांची माहिती देऊन आभार मानले.

यावेळी वाणिज्य उद्योग संघटनेचे अध्यक्ष प्रभाकर नागरमुनोळी, प्रोफेशनल फोरमचे डॉ. एच. बी. राजशेखर आणि बी. जी. धरेण्णी, लघुउद्योग भारतीचे सचिन सबनीस, इंडियन इन्स्टिट्यूट ऑफ इंजिनिअर्सचे सी. बी. हिरेमठ, क्रेडाईचे अध्यक्ष युवराज हुलजी आणि सदस्य आनंद कुलकर्णी, फाउंड्री क्लस्टरचे सचिव सदानंद हुंबरवाडी आणि सदस्य विजय मुच्छंडीकर, एफओएबी समन्वयक राजेंद्र मुंदड, केमिस्ट अँड ड्रगिस्ट असोसिएशनचे एस. एस. गडियाण्णवर तसेच विविध संघटनांचे प्रतिनिधी प्रसन्न कोचरी, एस. बी. दंडगी, अमित कालकुंद्री, अनिल रामदुर्ग आदी उपस्थित होते.

Related Articles

Back to top button