Belagavi NewsBelgaum NewsKannada NewsKarnataka NewsLatest

*ಮಗುವಿನ ವಿದ್ಯಾಭ್ಯಾಸಕ್ಕೆ ಸ್ಪಂದಿಸಿದ ಅಕ್ಕ ಪಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯರೂಪಕ್ಕೆ ಬಂದಿರುವ ಅಕ್ಕಾ ಪಡೆ ಅನೇಕ ಅಪರಾಧಗಳನ್ನು ತಡೆಯಲು ಯಶಸ್ವಿಯಾಗಿದ್ದು, ಇದೀಗ ಗಂಡ ಹೆಂಡತಿ ಜಗಳದಲ್ಲಿ ತೊಂದರೆ ಅನುಭವಿಸುತ್ತಿದ್ದ ಕುಟುಂಬಕ್ಕೆ ಆಸರೆ ಆಗಿದೆ.

ಬೆಳಗಾವಿ ಜಿಲ್ಲೆಯ ಕುರಿಹಾಳ ಗ್ರಾಮದ  ದೀಪಾಲಿ ವಿಲಾಸ್‌ ಕುದನೂರುಕರ್‌ ರವರು ಮಹಿಳಾ ಪೊಲೀಸ್‌ ಠಾಣೆಗೆ ಹೋಗಿ ಗಂಡ ಹೆಂಡತಿಯೊಂದಿಗೆ ಜಗಳ ಮಾಡಿದ ಕಾರಣಕ್ಕೆ ಮಕ್ಕಳ  ವಿದ್ಯಾಭ್ಯಾಸಕ್ಕೆ ತೊಂದರೆ ನೀಡುತ್ತಿದ್ದಾನೆಂದು ದೂರು ನೀಡಿದ ಕಾರಣ, ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್ ಪೆ‌ಕ್ಟರ್ (ಪಿಐ) ರವರು ಅಕ್ಕ ಪಡೆಯ ತಂಡವನ್ನು ಆ ಗ್ರಾಮಕ್ಕೆ ಕಳುಹಿಸಿ ಮಹಿಳೆ ಕೋರಿದ ದಾಖಲಾತಿಗಳು ಮತ್ತು ಬಟ್ಟೆಗಳು ಹಾಗೂ ದಿನ ನಿತ್ಯದ ಸಾಮಗ್ರಿಗಳನ್ನು ಪೂರೈಸಿ ನೆರವು ನೀಡಿದ್ದಾರೆ. 

ಅಕ್ಕಪಡೆ ತಂಡವು ನೊಂದ ಮಹಿಳೆಯ ಕರೆಗೆ ಸಹಾಯ ಮಾಡಿ, ದಂಪತಿಗಳಿಗೆಮಕ್ಕಳ ವಿದ್ಯಾಭ್ಯಾಸ ನೀಡುವಂತೆ ಸೂಚಿಸಿ, ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಮಹತ್ವವನ್ನು ಹೇಳುವುದರ ಮೂಲಕ ಕುಟುಂಬ ಕಲಹಗಳಾಗದಂತೆ ಕ್ರಮವಹಿಸಲು ಜಾಗೃತಿ ನೀಡಿತು.

Home add -Advt

Related Articles

Back to top button