*AI ಯುಗಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕೆಎಲ್ಎಸ್ ಜಿಐಟಿಯಲ್ಲಿ ಭವ್ಯ ಎಐ ಕಾನ್ಕ್ಲೇವ್*

ಪ್ರಗತಿವಾಹಿನಿ ಸುದ್ದಿ: ಕೃತಕ ಬುದ್ಧಿಮತ್ತೆ (AI) ಜಗತ್ತಿನ ಉದ್ಯೋಗ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ತಂದಿರುವ ಹಿನ್ನೆಲೆ, Karnataka Law Society ಸಂಸ್ಥೆಯ KLS Gogte Institute of Technology ವತಿಯಿಂದ ಶನಿವಾರ “Engineering 2.0: AI Redefining Careers” ಎಂಬ ವಿಷಯಾಧಾರಿತ ಭವ್ಯ ಎಐ ಕಾನ್ಕ್ಲೇವ್ ಆಯೋಜಿಸಲಾಯಿತು.
ತಂತ್ರಜ್ಞಾನ ಕಂಪನಿಗಳ ಪ್ರತಿನಿಧಿಗಳು, ಉತ್ಪಾದನಾ ಕೈಗಾರಿಕೆಗಳ ತಜ್ಞರು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ. ವಿಜಯ ಅಥವಳೆ ಅವರು, “ತಂತ್ರಜ್ಞಾನ ಕ್ಷೇತ್ರವು ಅತ್ಯಂತ ವೇಗವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಕೈಗಾರಿಕೆಗಳು ಸಂಪ್ರದಾಯಬದ್ಧ ಶಿಕ್ಷಣ ವ್ಯವಸ್ಥೆಯನ್ನು ಪರಿಷ್ಕರಿಸಿ, ವಿದ್ಯಾರ್ಥಿಗಳಿಗೆ ಭವಿಷ್ಯೋನ್ಮುಖ ಕೌಶಲ್ಯಗಳನ್ನು ಕಲಿಸುವುದು ಅವಶ್ಯಕವಾಗಿದೆ. ಕೆಎಲ್ಎಸ್ ಜಿಐಟಿ ಈ ದಿಸೆಯಲ್ಲಿ ಮುಂಚೂಣಿಯಲ್ಲಿದ್ದು, ಜಾಗತಿಕ ಮಟ್ಟದ ತಂತ್ರಜ್ಞಾನ ತಜ್ಞರನ್ನು ಕ್ಯಾಂಪಸ್ಗೆ ಕರೆಸಿ ವಿದ್ಯಾರ್ಥಿಗಳಿಗೆ ನೈಜ ಜಗತ್ತಿನ ಅನುಭವಗಳನ್ನು ಪರಿಚಯಿಸುತ್ತಿದೆ” ಎಂದು ಹೇಳಿದರು.
ಬೆಳಗಾವಿಯ ಕೆಲವು ಕೈಗಾರಿಕೆಗಳು ಈಗಾಗಲೇ ಎಐ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದು, ಇದರ ಪ್ರಯೋಜನ ಪಡೆಯುತ್ತಿರುವುದನ್ನೂ ಅವರು ವಿವರಿಸಿದರು.
ಕಾನ್ಕ್ಲೇವ್ನಲ್ಲಿ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಖ್ಯಾತ ತಜ್ಞರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಮೈಕ್ರೋಸಾಫ್ಟ್ನ ಎಂಜಿನಿಯರಿಂಗ್ ಮ್ಯಾನೇಜರ್ ಸೂರ್ಯಕಾಂತ್ ಮುತ್ನಾಳ್ “ಕ್ಲೌಡ್ ಟೆಕ್ನಾಲಜಿಗಳಲ್ಲಿ ಎಐ ಬಳಕೆ” ಕುರಿತು, ಕಾಗ್ನಿಜಂಟ್ನ ಉಪಾಧ್ಯಕ್ಷ ವೆಂಕಟೇಶ್ ರಾವ್ “ಟೆಕ್ ಸರ್ವಿಸ್ ಕ್ಷೇತ್ರದಲ್ಲಿ ಎಐಯ ಸಕಾರಾತ್ಮಕ ಪರಿಣಾಮ” ಕುರಿತು ಮಾತನಾಡಿದರು.
ಮೀಡಿಯಾಟೆಕ್ನ ಹಿರಿಯ ತಾಂತ್ರಿಕ ವ್ಯವಸ್ಥಾಪಕ ಕೀರ್ತಿಪ್ರಸಾದ್ ಕುಲಕರ್ಣಿ “ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಎಐ ಪರಿವರ್ತನೆ”, ಐಬಿಎಂನ ಪ್ರೋಗ್ರಾಂ ಡೈರೆಕ್ಟರ್ ಸೌರಭ್ ಕೌಶಿಕ್ “Agentic AI ಮತ್ತು ಡೇಟಾ ಸೊಲ್ಯೂಷನ್ಗಳು” ಕುರಿತು ವಿಶೇಷ ಅಧಿವೇಶನ ನಡೆಸಿದರು.
ಪೇಪಾಲ್ನ ಲೀಡ್ ಯುನಿವರ್ಸಿಟಿ ಟ್ಯಾಲೆಂಟ್ ಪಾರ್ಟ್ನರ್ ಪ್ರಿಯಾಂಕಾ ನಾಯಕ್ “ಟ್ಯಾಲೆಂಟ್ ಅಕ್ವಿಸಿಷನ್ ಮೇಲೆ ಎಐ ಪ್ರಭಾವ”, ಡೆಮೊಕ್ರಾಫ್ಟ್ ಎಐ ಸಂಸ್ಥೆಯ ಸಹ-ಸ್ಥಾಪಕ ಅಮಿತ್ ಘಾಡ್ಗೆ “B2B SAAS ಉತ್ಪನ್ನಗಳು”, ಬ್ರಾಡ್ಕಾಂನ ಪ್ರಿನ್ಸಿಪಲ್ ಎಂಜಿನಿಯರ್ ಅವಿನಾಶ ಪಾಟೀಲ್ “ಎಐಗಾಗಿ ನವೀನ ನೆಟ್ವರ್ಕ್ ಮೂಲಸೌಕರ್ಯ”, ಹಾಗೂ ಡಿಸೈನ್ ಥಿಂಕರ್ ಸಂಸ್ಥಾಪಕ ಎಚ್. ಎಸ್. ಪಾಟೀಲ್ “Artificial General Intelligence (AGI) ಮತ್ತು ವಿನೂತನ ವಾಸ್ತುಶಿಲ್ಪ ವಿನ್ಯಾಸಗಳಲ್ಲಿ ಎಐ ಬಳಕೆ” ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸಂಜೆಯ ಅಧಿವೇಶನದಲ್ಲಿ ಎಂಜಿನಿಯರಿಂಗ್ ಪ್ರವೇಶಕ್ಕೆ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಡಾ. ಅಥವಳೆ ಮತ್ತು ವಿವಿಧ ವಿಭಾಗಗಳ ಅಧ್ಯಾಪಕರೊಂದಿಗೆ ಸಂವಾದ ನಡೆಸಿದರು. ಎಂಜಿನಿಯರಿಂಗ್ ಶಿಕ್ಷಣದ ಬದಲಾಗುತ್ತಿರುವ ಸ್ವರೂಪ, ಕೈಗಾರಿಕೆಗಳ ನಿರೀಕ್ಷೆಗಳು ಹಾಗೂ ಭವಿಷ್ಯದ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಯಿತು.
ಪ್ರಿಯಾಂಕಾ ನಾಯಕ್ ಅವರ ನಿರೂಪಣೆಯಲ್ಲಿ ನಡೆದ ಪ್ಯಾನಲ್ ಚರ್ಚೆಯಲ್ಲಿ ಎಐ ಎಲ್ಲ ಶಾಖೆಗಳ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂಬುದನ್ನು ತಜ್ಞರು ಒತ್ತಿ ಹೇಳಿದರು. “AI for All Branches” ಎಂಬ ಧ್ಯೇಯವಾಕ್ಯದೊಂದಿಗೆ ಕೆಎಲ್ಎಸ್ ಜಿಐಟಿ ವಿದ್ಯಾರ್ಥಿಗಳನ್ನು ಭವಿಷ್ಯದ ತಂತ್ರಜ್ಞಾನ ಯುಗಕ್ಕೆ ಸಜ್ಜುಗೊಳಿಸುತ್ತಿದೆ ಎಂದು ಡಾ. ಅಥವಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ Karnataka Law Society ಅಧ್ಯಕ್ಷ ಪ್ರದೀಪ್ ಎಸ್. ಸಾವ್ಕಾರ್ ಅಧ್ಯಕ್ಷೀಯ ಭಾಷಣ ಮಾಡಿದರು. ಉಪಾಧ್ಯಕ್ಷರಾದ ಆರ್. ಬಿ. ಭಂಡಾರೆ, ಡಿ. ವಿ. ಕುಲಕರ್ಣಿ, ಅಧ್ಯಕ್ಷ ಎ. ಕೆ. ತಾಗರೆ, ಕಾರ್ಯದರ್ಶಿಗಳಾದ ವಿ. ಎಂ. ದೇಶಪಾಂಡೆ ಮತ್ತು ಎಸ್. ವಿ. ಗಣಾಚಾರಿ, ಕೆಎಲ್ಎಸ್ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಸೇರಿದಂತೆ ಕೆಎಲ್ಎಸ್ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
Recognizing the global paradigm shift brought about by Artificial Intelligence (AI), the Karnataka Law Society’s Gogte Institute of Technology (KLS GIT) hosted a landmark AI Conclave themed “Engineering 2.0: AI Redefining Careers” on Saturday 23rd May 2026.
The event was attended by huge number of people from Technology companies, Manufacturing Industries, College Principals and Teachers, Researchers and Students.
KLS GIT Principal Dr. Vijay Athavale explained that with technology evolving at an unprecedented pace, universities and industries must seize the moment to overhaul traditional learning and equip students and employees with future-ready skills. KLS GIT has firmly taken the lead in this educational transformation, bridging the gap between classroom learning and real-world tech breakthroughs by bringing global industry stalwarts directly to its campus. Few industries of Belagavi are already benefiting from the use of AI.
The conclave featured a stellar line-up of keynote speakers from some of the world’s most influential technology giants, each offering deep insights into how AI is creating new career pathways:
Suryakant Mutnal, Engineering Manager, Microsoft
Leveraging AI in Cloud Technologies
Venkatesh Rao, VP, Software & Platform Engineering, Cognizant,
AI’s positive impact on Tech Services Business
Keertiprasad Kulkarni, Senior Technical Manager at MediaTek
AI Evolution in Semi-Conductors
Saurabh Kaushik, Program Director, IBM,
Agentic AI & Data Solutions & AI Best Practices in a special session for Industries.
Priyanka Nayak, Lead University Talent Partner, PayPal
Impact of AI on Talent Acquisition.
Amit Ghadge, Co-Founder & CTO, Demokraft AI,
B2B SAAS Products
Avinash Patil, Principal Engineer, Broadcom
Innovative Network Infrastructure for AI
H. S. Patil, Founder, Design Thinker(AGI),
Artificial General Intelligence (AGI) & use of AI in Innovative Architecture Designs
In the evening, students aspiring to take admission into engineering courses and their parents interacted with Dr. Athavale and staff of various departments at KLS GIT. They discussed about the changing face of engineering and industry expectations. They were also provided an understanding of what was discussed in the sessions earlier including the panel discussion moderated by Ms. Priyanaka Naik with all experts which brought out essential aspects of how AI is creating abundant opportunities for students and industry at large. Finally, AI for all Branches was the mantra at KLS GIT Dr. Athavale explained.
The conclave was graced by esteemed dignitaries from the Karnataka Law Society: Shri Pradeep S. Sawkar (President, KLS) who delivered the Presidential Address, Vice Presidents Shri R. B. Bhandare and Shri D.V. Kulkarni; Chairman Shri A. K. Tagare; Secretaries Shri V. M. Deshpande and Shri S.V. Ganachari; Shri Rajendra Belgaumkar (Chairman, Governing Body, KLS GIT), members of the Board of Management of KLS.



