EducationKannada NewsKarnataka NewsLatest

*ಅಮೆರಿಕದ ಆಮ್‌ಹರ್ಸ್ಟ್ ಕಾಲೇಜಿನಿಂದ  ಕಂಪ್ಯೂಟರ್ ಸೈನ್ಸ್ ಹಾಗೂ ಇಂಗ್ಲಿಷ್ ಲಿಟರೇಚರ್ ನಲ್ಲಿ ಪದವಿ ಪಡೆದ ಶಿರಸಿಯ ಶ್ರೇಯಾ ಹೆಗಡೆ*

ಶೈಕ್ಷಣಿಕ, ಸಂಶೋಧನಾ ಅನುಭವಗಳ ಮೂಲಕ 14 ದೇಶಗಳಿಗೆ ಪ್ರವಾಸ ಮಾಡಿದ ಹೆಮ್ಮೆ

ಪ್ರಗತಿವಾಹಿನಿ ಸುದ್ದಿ: ಶಿರಸಿ: ಶಿರಸಿ ಮೂಲದ ಶ್ರೇಯಾ ಹೆಗಡೆ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿರುವ ಆಮ್‌ಹರ್ಸ್ಟ್ ಕಾಲೇಜಿನಿಂದ  ಕಂಪ್ಯೂಟರ್ ಸೈನ್ಸ್ ಹಾಗೂ ಇಂಗ್ಲಿಷ್ ಲಿಟರೇಚರ್ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಸುಮಾರು 3.5 ಕೋಟಿ ರೂಮ ಮೌಲ್ಯದ ಸಂಪೂರ್ಣ ವಿದ್ಯಾರ್ಥಿವೇತನದೊಂದಿಗೆ ಆಮ್‌ಹರ್ಸ್ಟ್ ಕಾಲೇಜಿಗೆ ಪ್ರವೇಶ ಪಡೆದಿದ್ದರು.


ಪದವಿ ಪೂರ್ವ ಶಿಕ್ಷಣದ ಅವಧಿಯಲ್ಲಿ ಶ್ರೇಯಾ ಅವರು ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಬಯೋಫಿಸಿಕ್ಸ್ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ ಗಮನ ಸೆಳೆದಿದ್ದರು. ಈ ಸಂಶೋಧನೆಯನ್ನು ಅವರು ಎಂಐಟಿ ಹಾಗೂ ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಕೈಗೊಂಡಿದ್ದರು.  ಅವರ ಸಂಶೋಧನಾ ಲೇಖನವು ಅಂತರರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಅವುಗಳಲ್ಲಿ ಒಂದನ್ನು ಇಟಲಿಯ ಜೆನೋವಾ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಹಾಗೂ ಮತ್ತೊಂದನ್ನು ಅಮೆರಿಕದ ಫಿಲಡೆಲ್ಫಿಯಾದಲ್ಲಿ ಪ್ರಸ್ತುತಪಡಿಸಿದ್ದರು‌ಎಂಬುದು ಉಲ್ಲೇಖನೀಯ.


ಇನ್ನು‌ ಆಮ್ ಹರ್ಸ್ಟ ಕಾಲೇಜಿಗೆ ಸೇರುವ ಮೊದಲು,  ಖಗೋಳ ಭೌತಶಾಸ್ತ್ರದಲ್ಲಿ ಸಂಶೋಧನೆ ಮಾಡಲು ಅವರು ಅಮೆರಿಕದ  ಪ್ರತಿಷ್ಠಿತ “ಸ್ಪಿರಿಟ್ ಆಫ್ ರಾಮಾನುಜನ ಫೆಲೋಶಿಪ್” ಪಡೆದಿದ್ದರು. ಜೊತೆಗೆ ಜಪಾನ್ ಮೂಲದ  ಫೌಂಡೇಶನ್‌ನ  ವಿದ್ಯಾರ್ಥಿವೇತನದ ಮೂಲಕ ನಾಲ್ಕು ವರ್ಷಗಳ ಕಾಲ ಹಲವು ದೇಶಗಳಲ್ಲಿ ನಡೆದ ಶೈಕ್ಷಣಿಕ ಹಾಗೂ ತಂತ್ರಜ್ಞಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರಕಿತ್ತು.

Home add -Advt


ಕಳೆದ ವರ್ಷ ಅವರು ಕೀನ್ಯಾದಲ್ಲಿ ಡ್ರೋನ್ ಮ್ಯಾಪಿಂಗ್ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ್ದು, 130 ಪುಟಗಳ ಪದವಿ ಪ್ರಬಂಧ ಕೂಡ ರಚಿಸಿದರು. ಅಲ್ಲದೆ ತಮ್ಮ ಸಂಶೋಧನಾ ಕಾರ್ಯವನ್ನು ಟೋಕಿಯೋದಲ್ಲಿ ಸಾಫ್ಟ್‌ಬ್ಯಾಂಕ್ ಸಂಸ್ಥಾಪಕ ಮಸಯೋಶಿ ಸನ್ ಅವರ ಸಮ್ಮುಖದಲ್ಲಿ ಮಂಡಿಸಲು ಆಹ್ವಾನಿಸಲ್ಪಟ್ಟಿದ್ದರು.
ತಮ್ಮ ಶೈಕ್ಷಣಿಕ, ಸಂಶೋಧನಾ ಹಾಗೂ ನಾಯಕತ್ವದ ಅನುಭವಗಳ ಮೂಲಕ ಅವರು 14 ದೇಶಗಳಿಗೆ ಪ್ರವಾಸ ಕೈಗೊಂಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.


“ಸ್ಟಡಿ ಅಬ್ರಾಡ್ ಕಾರ್ಯಕ್ರಮದ ಭಾಗವಾಗಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಪ್ರಸ್ತುತ ಅವರು ಬೋಸ್ಟನ್‌ನ ಪ್ರತಿಷ್ಟಿತ  ಮ್ಯಾಕಿನ್ಸಿ ಕಂಪನಿಯಲ್ಲಿ  ಕೆಲಸ ಮಾಡುವ ಅವಕಾಶ‌ ಪಡೆದಿದ್ದಾರೆ. ಶ್ರೇಯಾ ಹೆಗಡೆ ಅವರು ಮತ್ತಿಹಳ್ಳಿಯ ಶಾಂತಲಾ ಹೆಗಡೆ ಹಾಗೂ ಕೆಂಗ್ರೆ ಬಾಳೆಗದ್ದೆಯ ಸುರೇಶ ಹೆಗಡೆ ಅವರ ಪುತ್ರಿ.

Related Articles

Back to top button