Belagavi NewsBelgaum NewsCrimeKannada NewsKarnataka NewsNational

*ಚಿನ್ನ ದೋಚಲು ಯತ್ನಿಸಿದ ಕಳ್ಳಿಯರಿಗೆ ಧರ್ಮದೇಟು ನೀಡಿದ ಜನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಹಾಡುಹಗಲೇ ಚಿನ್ನ ಖರೀದಿ ಮಾಡುವ ನೆಪದಲ್ಲಿ ಜ್ಯುವೆಲರಿ ಶಾಪ್‌ಗೆ ನುಗ್ಗಿ ಒಡವೆಗಳನ್ನು ದೋಚಲು ಯತ್ನಿಸಿದ ಇಬ್ಬರು ಕಳ್ಳಿಯರನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿರುವ ಘಟನೆ ನಡೆದಿದೆ. 

ಬೆನಕಟ್ಟಿ ಗ್ರಾಮದಲ್ಲಿರುವ ಜ್ಯುವೆಲರಿ ಶಾಪ್ ಒಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಕೆಲವು ಕಿಲಾಡಿ ಮಹಿಳೆಯರು, ತಮಗೆ ಚಿನ್ನದ ಆಭರಣಗಳನ್ನು ತೋರಿಸುವಂತೆ ಮಾಲೀಕರಲ್ಲಿ ಕೇಳಿದ್ದಾರೆ. ಮಾಲೀಕರು ನಕಲಿ ಗ್ರಾಹಕರ ಅಸಲಿ ಬುದ್ದಿ ತಿಳಿಯದೆ ಒಡವೆಗಳನ್ನು ಮುಂದಿಟ್ಟಿದ್ದಾರೆ. 

Home add -Advt

ಈ ವೇಳೆ ಅತ್ಯಂತ ಚಾಣಾಕ್ಷತನದಿಂದ ವರ್ತಿಸಿದ ಮಹಿಳೆಯರು, ಮಾಲೀಕನ ಕಣ್ಣು ತಪ್ಪಿಸಿ ಚಿನ್ನದ ಒಡವೆಯೊಂದನ್ನು ನೇರವಾಗಿ ತಮ್ಮ ಬಾಯಿಯೊಳಗೆ ಇಟ್ಟುಕೊಂಡು ಅಲ್ಲಿಂದ ಜಾಣೆಯಿಂದ ಕಾಲ್ಕಿಳಲು ಮಾಡಲು ಪ್ಲಾನ್ ಮಾಡಿದ್ದರು.

ಆದರೆ, ಮಹಿಳೆಯರ ಈ ಕಳ್ಳಾಟವನ್ನು ಜ್ಯುವೆಲರಿ ಅಂಗಡಿಯ ಮಾಲೀಕ ತಕ್ಷಣವೇ ಗಮನಿಸಿದ್ದಾರೆ. ಚಿನ್ನದೊಂದಿಗೆ ಅಂಗಡಿಯಿಂದ ಹೊರಗೆ ಹೆಜ್ಜೆ ಇಡುತ್ತಿದ್ದ ಮಹಿಳೆಯರನ್ನು ಕಂಡು ಮಾಲೀಕರು ಜೋರಾಗಿ ಕೂಗಿಕೊಂಡಿದ್ದಾರೆ. 

ಮಾಲೀಕನ ಕೂಗಾಟ ಕೇಳಿ ಅಲರ್ಟ್ ಆದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸ್ಥಳೀಯ ವ್ಯಾಪಾರಿಗಳು, ಓಡಿ ಹೋಗುತ್ತಿದ್ದ ಕಿಲಾಡಿ ಲೇಡಿಗಳನ್ನು ಬೆನ್ನಟ್ಟಿ ಹಿಡಿದು ಗ್ರಾಮದ ಸಾರ್ವಜನಿಕ ಕಂಬಕ್ಕೆ ಹಗ್ಗದಿಂದ ಗಟ್ಟಿಯಾಗಿ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. 

ಈ ಕುರಿತು ಯರಗಟ್ಟಿ ಪೊಲೀಸ್ ಠಾಣೆಗೆ ಅಧಿಕೃತ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಗ್ರಾಮಸ್ಥರು ಆರೋಪಿ ಮಹಿಳೆಯರನ್ನು ಒಪ್ಪಿಸಿದ್ದಾರೆ. 

Related Articles

Back to top button