Kannada NewsKarnataka NewsLatestPragativahini Special
*ವಿಧಾನಸೌಧದಲ್ಲಿ ವಿದ್ಯುತ್, ನೀರಿನ ಮಿತವ್ಯಯ; ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ*: *ಪ್ರಗತಿವಾಹಿನಿ ವರದಿಗೆ ಸರಕಾರದ ಸ್ಪಷ್ಟನೆ*

“ವಿಧಾನಸೌಧದಲ್ಲಿ ವಿದ್ಯುತ್, ನೀರಿನ ಮಿತವ್ಯಯ: ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ”
ಸಾರಾಂಶ:
- ಟೈಮರ್ ಮೂಲಕ ಬೀದಿ ದೀಪ, ಕಚೇರಿ ಬಳಿಕ ಎಲ್ಲಾ ಲೈಟ್ ಆಫ್ – ವಿದ್ಯುತ್ ಉಳಿತಾಯಕ್ಕೆ ಕ್ರಮ
- Ball Valve ಅಳವಡಿಕೆ, ಸಂಸ್ಕರಿಸಿದ ನೀರಿನ ಬಳಕೆ – ನೀರು ವ್ಯರ್ಥ ತಡೆ
- Rain Water Harvesting ಮತ್ತು BWSSB ಸಹಕಾರ – ನೀರಿನ ಸಂರಕ್ಷಣೆಗೆ ಒತ್ತು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿಧಾನಸೌಧ ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಮತ್ತು ನೀರಿನ ಸಂರಕ್ಷಣೆ ಕುರಿತು ಪ್ರಗತಿವಾಹಿನಿಯಲ್ಲಿ ವರದಿಯಾಗಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ರಾಜ್ಯ ಸರ್ಕಾರವು ಸಂರಕ್ಷಣೆಗೆ ಈಗಾಗಲೇ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದೆ.
ವಾರ್ತಾ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪರ ಈ ಸ್ಪಷ್ಟನೆ ನೀಡಿದ್ದಾರೆ. ಅದರ ಪೂರ್ಣ ವಿವರ ಇಲ್ಲಿದೆ –
ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳು:
- ವಿದ್ಯುತ್ ಮಿತವ್ಯಯ: ವಿಧಾನಸೌಧದ ಆವರಣದಲ್ಲಿರುವ ಹೊರಾಂಗಣ ವಿದ್ಯುತ್ ದೀಪಗಳನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಅನುಗುಣವಾಗಿ ಆಟೋಮ್ಯಾಟಿಕ್ ಟೈಮರ್ ಮೂಲಕ On/Off ಮಾಡಲಾಗುತ್ತಿದೆ. ಪ್ರತಿದಿನ ಕಚೇರಿ ಮುಗಿದ ನಂತರ ಗ್ರೂಪ್-ಡಿ ಸಿಬ್ಬಂದಿಯಿಂದ ಎಲ್ಲಾ ದೀಪಗಳು ಮತ್ತು ಅನಗತ್ಯ ವಿದ್ಯುತ್ ಉಪಕರಣಗಳನ್ನು ಬಂದ್ ಮಾಡಲಾಗುತ್ತದೆ. ಎಲ್ಲಾ ಏರ್ ಕಂಡಿಷನರ್ಗಳನ್ನು 24 ರಿಂದ 26 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಳಸುವಂತೆ ಸೂಚಿಸಲಾಗಿದೆ.
- ನೀರಿನ ಸಂರಕ್ಷಣೆ: ಮೇಲ್ಛಾವಣಿಯ ನೀರಿನ ಟ್ಯಾಂಕ್ಗಳಿಂದ ನೀರು ವ್ಯರ್ಥವಾಗದಂತೆ Ball Valve ಅಳವಡಿಸಲಾಗಿದೆ. ವಿಧಾನಸೌಧದ ನೀರಿನ ಸೋರಿಕೆ ಮತ್ತು ಅನಗತ್ಯ ಬಳಕೆಯನ್ನು ತಡೆಗಟ್ಟಲು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ. ಉದ್ಯಾನಗಳಿಗೆ ಸಂಸ್ಕರಿಸಿದ ನೀರನ್ನೇ ಬಳಸಲಾಗುತ್ತಿದೆ.
- ಇತರೆ ವ್ಯವಸ್ಥೆ: ವಿಧಾನಸೌಧದಲ್ಲಿ ಈಗಾಗಲೇ ಎರಡು ಬೋರ್ವೆಲ್ಗಳು ಕಾರ್ಯನಿರ್ವಹಿಸುತ್ತಿವೆ. Rain Water Harvesting ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ. ನೀರಿನ ಮಿತವ್ಯಯದ ಬಗ್ಗೆ BWSSB ಯ ತಾಂತ್ರಿಕ ಸಹಕಾರವನ್ನೂ ಪಡೆಯಲಾಗುತ್ತಿದೆ.
ಈ ಎಲ್ಲಾ ಕ್ರಮಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಸೀಲಸುಣಿ ಮತ್ತು ಜೂನಿಯರ್ ಇಂಜಿನಿಯರ್ ಅವರು ನಿಯಮಿತವಾಗಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು 21.02.2022 ರಂದೇ ಮಾರ್ಗಸೂಚಿಗಳನ್ನು ಹೊರಡಿಸಿದೆ.


