Belagavi NewsBelgaum NewsCrimeKarnataka NewsLatest
*ಗಂಡನ ಮನೆ ಸಾಲ ತೀರಿಸುವಂತೆ ಕಿರುಕುಳ: ಮೂರು ವರ್ಷದ ಕಂದನ ಜೊತೆ ಆತ್ಮಹತ್ಯೆಗೆ ಶರಣಾದ ತಾಯಿ*

ಪ್ರಗತಿವಾಹಿನಿ ಸುದ್ದಿ: ಮೂರು ವರ್ಷದ ಮಗನೊಂದಿಗೆ ತಾಯಿ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಪೀರನವಾಡಿಯಲ್ಲಿ ಈ ಘಟನೆ ನಡೆದಿದೆ. ಗಂಡನ ಮನೆಯವರ ಸಾಲ ತೀರಿಸುವಂತೆ ಪತಿ, ಅತ್ತೆ-ಮಾವ ಒತ್ತಡ ಹಾಕುತ್ತಿದ್ದರಂತೆ ಅಲ್ಲದೇ ಪ್ರತಿದಿನ ದೈಹಿಕ ಹಿಂಸೆ., ಕಿರುಕುಳ ನೀಡುತ್ತಿದ್ದರಂತೆ.
ಇದರಿಂದ ಬೇಸತ್ತು ತಾಯಿ, ತನ್ನ ಮೂರು ವರ್ಷದ ಮಗನೊಂದಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರೇಮಾ ನಾಗೇಶ ತಳವಾರ (28) ಹಾಗೂ ಅವರ 3 ವರ್ಷದ ಪುತ್ರ ಭುವನ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ, ಅತ್ತೆ-ಮಾವ, ಮೈದುನ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.



