Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿಯಲ್ಲಿ ಪತ್ರಕರ್ತರ ಸೋಗಿನಲ್ಲಿ ಸುಲಿಗೆ: ನಾಲ್ವರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪತ್ರಕರ್ತರ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜು.18 ರಂದು ಕೊಟಭಾಗಿಯ ಮಹಿಬೂಬ್ ಬಾಬುಸಾಬ್ ಜಮಾದಾರ್ ಅವರಿಗೆ ಕಾಕತಿಯ ವ್ಯಕ್ತಿಯೊಬ್ಬ ಬಂದು, ಗಾಂಜಾ ಚೀಟಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ 2 ಚೀಟ್ ಗಾಂಜಾ ನೀಡಿ ₹1,000 ಪಡೆದುಕೊಂಡಿದ್ದನು. ತಕ್ಷಣವೇ ಆತನ ಹಿಂಭಾಗದಿಂದ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು, ದೂರುದಾರರನ್ನು ಹತ್ತಿರದ ಕಬ್ಬಿನ ಗದ್ದೆಗೆ ಕರೆದೊಯ್ದು “ನಾವು ಪೊಲೀಸರು, ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ” ಎಂದು ಬೆದರಿಸಿದ್ದಾರೆ. ದೂರುದಾರರ ಬಳಿಯಿದ್ದ ಗಾಂಜಾ ಪೊಟ್ಟಣಗಳನ್ನು ಬಿಚ್ಚಿಸಿ ಫೋಟೋ ಹಾಗೂ ವೀಡಿಯೋ ಮಾಡಿಕೊಂಡಿದ್ದಾರೆ. ನಂತರ ಅವರನ್ನು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಹಾಕಿಕೊಂಡು ಹುಕ್ಕೇರಿ ಪೊಲೀಸ್ ಠಾಣೆಯ ಹತ್ತಿರ ಕರೆತಂದು, “ಠಾಣೆಗೆ ಕರೆದೊಯ್ದು ಕೇಸ್ ಹಾಕಿ ಹಿಂಡಲಗಾ ಜೈಲಿಗೆ ಕಳುಹಿಸಬೇಕೋ ಅಥವಾ ಹಣ ನೀಡಿ ಮುಗಿಸಿಕೊಳ್ಳುತ್ತೀಯೋ?” ಎಂದು ಬೆದರಿಸಿ ₹2 ರಿಂದ ₹3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಅಂತಿಮವಾಗಿ ದೂರುದಾರರಿಂದ 60,000 ನಗದನ್ನು ಸುಲಿಗೆ ಮಾಡಿ, ಅವರ ವೀಡಿಯೋವನ್ನು ‘ ಜಿ.ಡಿ. ಟಿವಿ’ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 164/2026, ಕಲಂ 319(2), 318(4), 140(2) ಹಾಗೂ 3(6) BNS ನಡಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಐ.ಪಿ.ಎಸ್ ಹಾಗೂ ಹುಕ್ಕೇರಿ ಇನ್ಸ್‌ಪೆಕ್ಟರ್ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿ ಬೆಳಗಾವಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

Home add -Advt

ಬಂಧಿತ ಆರೋಪಿಗಳ ವಿವರ

ಕಲ್ಲಪ್ಪ ಬಸವಣ್ಣಿ ಮಾಳಾಜ ಸಂಪೂರ್ಣಾ ಯುಟ್ಯುಬರ್, ಮಲ್ಲಿಕಾರ್ಜುನ ಸಿದ್ದಪ್ಪ ಜುಲಫಿ ಎಮ್2 ಯುಟ್ಯುಬರ್, ಪೃಥ್ವಿರಾಜ್ ನಾರಾಯಣ ಚೌಹಾಣ್ ಜಿ.ಡಿ ಯುಟ್ಯುಬರ್ ಹಾಗೂ ಡೇವಿಡ್ ಜಾಕೋಬ್ ತಂಗೇರಾಳ ಜಿ.ಡಿ ಯುಟ್ಯುಬರ್ ಎಂಬುವರನ್ನು ಬಂಧಿಸಲಾಗಿದೆ.

ಒಂದು ಕಾರ್, ಎರಡು ಮೊಬೈಲ್ ಫೋನ್‌ಗಳು, ಸುಲಿಗೆ ಮಾಡಿದ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು J.M.F.C. ಹುಕ್ಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Related Articles

Back to top button