Belagavi NewsBelgaum NewsCrimeKannada NewsKarnataka News

*ಬಡ್ಡಿ ದಂಧೆಕೋರ ಅಪ್ಪಾ ಮಗನ ಮೇಲೆ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅನಧಿಕೃತವಾಗಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಅಪ್ಪ ಮಗನ  ಮೇಲೆ ಗೋಕಾಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯಲ್ಲಪ್ಪ ಬಿರಾಜಗೋಳ, ಹಾಗೂ ವಿಠ್ಠಲ್ ಯಲ್ಲಪ್ಪ ಬಿರಾಜಗೋಳ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ಕೆ ಎಸ್ ಪಿ ಆಪ್ ಮೂಲಕ ದಾಖಲಾಗಿದ್ದ ಅರ್ಜಿಯನ್ನು ಗಂಭಿರವಾಗಿ ಪರಿಗಣಿಸಿದ ಬೆಳಗಾವಿ ಪೊಲೀಸರು ಅರ್ಜಿ ಆದರಿಸಿ ಸರ್ಚ್ ವಾರಂಟ್ ಪಡೆದು ಮನೆಗೆ ತೆರಳಿದ್ದರು. ಈ ವೇಳೆ ಅಕ್ರಮ ಬಡ್ಡಿ ದಂಧೆಯ ಹಲವು ದಾಖಲೆ ಪತ್ತೆಯಾಗಿದೆ. 

ದಾಖಲೆ ಪರಿಶೀಲನೆ ವೇಳೆ ಮನೆಯಲ್ಲಿ 6.15 ಲಕ್ಷ(6,15000) ನಗದು ಪತ್ತೆಯಾಗಿದೆ.‌ ಹಲವು ಬ್ಲಾಂಕ್ ಚೆಕ್, ಪ್ರಾಮಿಸರಿ ನೋಟ್ಸ್, ಖಾಲಿ ಬಾಂಡ್ ಸೇರಿ ದಾಖಲೆಗಳು ಜಪ್ತಿ ಮಾಡಲಾಗಿದೆ. ಆರೋಪಿರ ವಿರುದ್ಧ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button