Kannada NewsKarnataka NewsLatest

*ವೃಷಭಾವತಿ ನದಿಯಲ್ಲಿ ತೇಲಿ ಬರುತ್ತಿದೆ ಕಂತೆ ಕಂತೆ ನೋಟುಗಳು*

ಪ್ರಗತಿವಾಹಿನಿ ಸುದ್ದಿ: ವೃಷಭಾವತಿ ನದಿಯಲ್ಲಿ ಕಂತೆ ಕಂತೆ ನೋಟುಗಳು ತೇಲುತ್ತಿದ್ದು, ಗ್ರಾಮಸ್ಥರಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ವೃಷಭಾಪುರ ಗ್ರಾಮದ ಬಳಿಯ ವೃಷಭಾವತಿ ನದಿಯಲ್ಲಿ ಕಂತೆ ಕಂತೆ ನೋಟುಗಳು ತೇಲಿಬರುತ್ತಿವೆ. ಇದನ್ನು ಕಂಡು ಸ್ಥಳೀಯರು ದಂಗಾಗಿದ್ದಾರೆ.

Home add -Advt

500 ರೂಪಾಯಿ ಮುಖಬೆಲೆಯ ಬರೋಬ್ಬರಿ 20 ಕಂತೆ ನೋಟುಗಳು ನೀರಿನಲ್ಲಿ ಬಿದ್ದಿದ್ದು, ನದಿಯಲ್ಲಿ ತೇಲಿ ಬರುತ್ತಿದೆ. ಗ್ರಾಮಸ್ಥರು ಮೊದಲಿಗೆ ಅಸಲಿ ಹಣವೇ ಇರಬೇಕೆಂದು ಭಾವಿಸಿದ್ದರು. ಆದರೆ, ಹತ್ತಿರ ಹೋಗಿ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಗಳು ಎಸೆದು ಹೋಗಿರುವಎಲ್ಲಾ ನೋಟುಗಳು ನಕಲಿ ಎಂಬುದು ಬಯಲಾಗಿದೆ.


Related Articles

Back to top button