*ಪ್ರತಿಷ್ಠಿತ ಪ್ರಶಸ್ತಿ ಪಡೆದ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಸಂಸ್ಥೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ, ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಸಂಸ್ಥೆ (KLS GIT), ಬೆಂಗಳೂರಿನಲ್ಲಿ ನಡೆದ FKCCI Industry–Institution Leaders’ Confluence 2026 ಕಾರ್ಯಕ್ರಮದಲ್ಲಿ ಪ್ರತಿಷ್ಠಿತ “Excellence in Skill Development Award” ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು Federation of Karnataka Chambers of Commerce and Industry (FKCCI) ಆಯೋಜಿಸಿತು.
ಈ ಪ್ರಶಸ್ತಿಯನ್ನು KLS GIT ಕಾಲೇಜಿಮ ಪ್ರಾಂಶುಪಾಲರಾ ಡಾ. ವಿಜಯ ಅಥವಲೆ ಅವರು ಸ್ವೀಕರಿಸಿದರು. ಪ್ರಶಸ್ತಿಯನ್ನು Sansera Engg. Ltdನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ CA ಎಫ್. ಆರ್. ಸಿಂಗ್ವಿ ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ, ಸಚಿವರಾದ ಡಾ. ಅಜಯ್ ಸಿಂಗ್, ಹಾಗೂ,ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಇ. ವಿ. ರಾಮಣ ರೆಡ್ಡಿ ಉಪಸ್ಥಿತರಿದ್ದರು.
ಈ ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕಾ ನಾಯಕರು, ಉನ್ನತ ಶಿಕ್ಷಣ ಸಂಸ್ಥೆಗಳು, ನೀತಿ ರೂಪಿಸುವವರು, ಸೆಕ್ಟರ್ ಸ್ಕಿಲ್ ಕೌನ್ಸಿಲ್ಗಳು, ಕಾನ್ಸುಲೇಟ್ಗಳು, ವಾಣಿಜ್ಯ ಪ್ರತಿನಿಧಿಗಳು ಹಾಗೂ ಜಾಗತಿಕ ವಾಣಿಜ್ಯ ಮಂಡಳಿಗಳ ಜಾಲವು ಸೇರಿಕೊಂಡು ಕೌಶಲ್ಯಾಭಿವೃದ್ಧಿ, ಉದ್ಯೋಗಾರ್ಹತೆ ಮತ್ತು ಕಾರ್ಮಿಕ ಪರಿವರ್ತನೆ ಕುರಿತು ಚರ್ಚೆ ನಡೆಸಿದರು.
ಈ ಗೌರವವು KLS GITನ ಕೌಶಲ್ಯಾಧಾರಿತ ಶಿಕ್ಷಣದ ನಿರಂತರ ಬದ್ಧತೆಯನ್ನು ಹಾಗೂ ಉದ್ಯಮೋನ್ಮುಖ ಕಾರ್ಮಿಕ ಶಕ್ತಿಯನ್ನು ರೂಪಿಸುವಲ್ಲಿ ಸಂಸ್ಥೆಯ ಪಾತ್ರವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಸಂಸ್ಥೆಯು ಕಳೆದ 47 ವರ್ಷಗಳ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸುತ್ತಿದೆ.




