*ಬಿಜೆಪಿ ಆಂತರಿಕ ಬಿಕ್ಕಟ್ಟು ಮುಚ್ಚಿಕೊಳ್ಳಲು ಪಾದಯಾತ್ರೆ: ಸಿಎಂ ಡಿ ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕೆಪಿಎಸ್ಸಿ ವಿಚಾರವಾಗಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಹೋರಾಟವಲ್ಲ. ಬದಲಿಗೆ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮುಚ್ಚಿಕೊಳ್ಳುವ ಪ್ರಯತ್ನ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನ ಎಫ್ ಕೆಸಿಸಿಐ ಕಚೇರಿಯ ಬಳಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
“ಕೆಪಿಎಸ್ಸಿ ಅಕ್ರಮದಲ್ಲಿ ಬಿಜೆಪಿ ನಾಯಕರ ಸಂಪರ್ಕದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ಗೃಹ ಸಚಿವರು ಹಾಗೂ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಲಾಗಿದೆ. ತನಿಖೆಯ ಸಂಪೂರ್ಣ ವರದಿ ಇನ್ನೂ ತಮ್ಮ ಕೈಗೆ ಬಂದಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿಯಷ್ಟೇ ತಮಗೆ ತಿಳಿದಿದೆ” ಎಂದರು.
ಕೆಪಿಎಸ್ಸಿ ಹಗರಣಗಳ ಪಿತಾಮಹ ಎನ್ ಡಿಎ
“ಕೆಪಿಎಸ್ಸಿಯಲ್ಲಿ ನಡೆದಿರುವ ಅಕ್ರಮಗಳ ಹಿಂದೆ ಯಾರ ಸಂಪರ್ಕವಿದೆ ಎಂಬುದು ತನಿಖೆಯಿಂದ ಹೊರಬರಲಿದೆ. ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಿಸಿದವರು ಯಾರು? ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದವರು ಯಾರೆಂಬುದು ಕೂಡ ಪರಿಶೀಲನೆಯಾಗಬೇಕು” ಎಂದು ಹೇಳಿದರು.
“ಕೆಪಿಎಸ್ ಸಿ ಹಗರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಎನ್ ಡಿಎ ಮುಖಂಡರ ವಿರುದ್ಧ ಗೃಹ ಸಚಿವರ ಬಳಿ ಇರುವ ಮಾಹಿತಿಯನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಬಹಿರಂಗಪಡಿಸಲಾಗುವುದು” ಎಂದರು.
ರಾಜ್ಯಪಾಲರ ವರದಿ ಆಧರಿಸಿ ಕ್ರಮ
“ರಾಜ್ಯಪಾಲರಿಂದ ಬಂದಿರುವ ವರದಿ ಹಾಗೂ ತನಿಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮೋದನೆ ನೀಡಲಾಗಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ವಿಪಕ್ಷಗಳಿಗೆ ನಾಚಿಕೆಯಾಗಬೇಕು
“ಅವರ ಪಾದಯಾತ್ರೆ ನಿಜವಾದ ಹೋರಾಟವಲ್ಲ. ಬಿಜೆಪಿ ಸಂಘಟನೆಯೊಳಗಿನ ಬಿಕ್ಕಟ್ಟನ್ನು ಮುಚ್ಚಿಕೊಳ್ಳುವ ಪ್ರಯತ್ನ. ಅವರು ಪಾದಯಾತ್ರೆ ಮಾಡಲಿ. ಅದಕ್ಕೆ ನನ್ನ ಯಾತ್ರೆ ಏನು ಎಂಬುದನ್ನು ಸದ್ಯಕ್ಕೆ ಹೇಳುವುದಿಲ್ಲ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ” ಎಂದು ಹೇಳಿದರು.
“ಅವರು ಹೇಳಿದ್ದನ್ನು ಕೇಳಿಕೊಂಡು, ಅವರಿಗೆ ನೀಡಬೇಕಾದ ಗೌರವವನ್ನು ನೀಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಗೌರವವನ್ನು ಸ್ವೀಕರಿಸಲು ಅವರು ಸಿದ್ಧರಿಲ್ಲ ಎಂದಾದರೆ, ಅವರ ರಾಜಕಾರಣ ಅವರು ಮಾಡಲಿ; ನಮ್ಮ ರಾಜಕಾರಣ ನಾವು ಮಾಡುತ್ತೇವೆ” ಎಂದರು.
“ಕೆಪಿಎಸ್ ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದು ಬಿಜೆಪಿ. ಅವರೊಂದಿಗೆ ಸಂಪರ್ಕ ಹೊಂದಿದ್ದವರು ಯಾರು ಎಂಬುದರ ಬಗ್ಗೆಯೂ ಪರಿಶೀಲನೆ ನಡೆಯಬೇಕು. ಅವರನ್ನು ಅಮಾನತು ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಹಿಂದೆ ಪತ್ರ ಬರೆದಿದ್ದರು” ಎಂದು ಹೇಳಿದರು.
ಜನರ ಸಮಸ್ಯೆ ಬಗೆಹರಿಸುವುದು ಮುಖ್ಯ
“ಬಡವರು, ರೈತರು, ಕಾರ್ಮಿಕರು ಹಾಗೂ ಬರಗಾಲದಿಂದ ಸಂಕಷ್ಟಕ್ಕೊಳಗಾದ ಜನರಿಗೆ ನೆರವಾಗುವುದು ನಮ್ಮ ಜವಾಬ್ದಾರಿ. ಅಭಿವೃದ್ಧಿಯ ಕೆಲಸಗಳನ್ನು ಬದಿಗೊತ್ತಿ ರಾಜಕೀಯ ಆರೋಪ, ಪ್ರತ್ಯಾರೋಪಗಳಲ್ಲಿ ಸಮಯ ವ್ಯರ್ಥ ಮಾಡಲು ನಾವು ಸಿದ್ಧರಿಲ್ಲ” ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ಸಂದೇಶ: ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕು
“ರಾಹುಲ್ ಗಾಂಧಿ ಅವರು ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕು, ಧ್ವನಿ ಎತ್ತುವ ಹಕ್ಕು ಮತ್ತು ಸಮಾಜದ ಎಲ್ಲ ವರ್ಗಗಳ ಪರ ನಿಲ್ಲುವ ಹಕ್ಕಿದೆ ಎಂಬ ಸಂದೇಶ ನೀಡುತ್ತಿದ್ದಾರೆ. ಇಂತಹ ಮನೋಭಾವವೇ ಪ್ರಜಾಪ್ರಭುತ್ವದ ಮೂಲ ಆಶಯ ಬಲಪಡಿಸುತ್ತದೆ” ಎಂದು ಹೇಳಿದರು.
“ಸಮಾಜದ ಎಲ್ಲ ವರ್ಗಗಳ ಧ್ವನಿಗೂ ಅವಕಾಶ ನೀಡುವುದು, ಅವರ ಪರ ನಿಲ್ಲುವುದು ಹಾಗೂ ಹಕ್ಕುಗಳಿಗೆ ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಪ್ರಮುಖ ಅಂಶ” ಎಂದು ಅಭಿಪ್ರಾಯಪಟ್ಟರು.
BJP’s Padayatra is an attempt to cover up its internal crisis: CM DK Shivakumar
NDA is the father of KPSC scams
Resolving people’s problems is our priority
“The padayatra undertaken by the BJP is not a political struggle. It is an attempt to overcome the internal crisis within the BJP,” said Chief Minister D.K. Shivakumar.
He was responding to media queries near the FKCCI office in Bengaluru on Wednesday.
“Information has been received about the alleged involvement of BJP leaders in the KPSC scam. The Home Minister and officials have been provided with the necessary information.
However, the complete investigation report has not yet been received. At present, we are aware only of the information that has appeared in the media,” he said.
NDA is the father of KPSC scams
“The investigation will reveal who is behind the irregularities in the KPSC. It should also be investigated as to who appointed the KPSC Chairman and who was in contact with BJP leaders,” he said.
“The information available with the Home Minister regarding the BJP and NDA’s connection with the KPSC scams will be disclosed at the appropriate time,” he said.
Action based on Governor’s report
“The Governor’s report and issues related to the investigation were discussed and approved by the Cabinet. Further action will be taken based on the findings of the investigation,” the CM said.
Opposition parties should be ashamed
“Their padayatra is not a genuine struggle. It is an attempt to overcome the crisis within the BJP organization. Let them undertake their padayatra. I will not disclose what our yatra is for at this stage. We will not sit idle,” he said.
“We have heard what they have said and given them the respect they deserve. If they are not prepared to accept our respect, let them pursue their politics. We will pursue ours,” he said.
“The KPSC Chairman was appointed by the BJP. There should also be an inquiry into who was in contact with him. Union Minister Pralhad Joshi himself had earlier written a letter seeking his suspension,” he said.
Resolving people’s problems is our priority
“It is our responsibility to stand by the poor, farmers, workers and people affected by drought. The responsibility entrusted to us by the people is very important. We are not prepared to waste time on political allegations and counter-allegations by putting development work on the back burner,” he clarified.
Rahul Gandhi’s message: Everyone has the right to speak
“Rahul Gandhi is conveying the message that everyone has the right to speak, the right to raise their voice and the right to stand up for all sections of society. Such an approach strengthens the fundamental values of democracy,” he said.
“Giving space to the voices of all sections of society, standing up for them and raising their voices for their rights are important aspects of democracy,” he opined.


